Site icon Ullalavani

ಧಾರ್ಮಿಕ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ: ಉಡುಪಿ ಖಾಝಿ

UN NETWORKS

ಉಳ್ಳಾಲ: ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯೆವಸ್ಥೆಗಳು ಇದ್ದರೂ ಕೂಡಾ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅಭಿಪ್ರಾಯಪಟ್ಟರು.

ಅವರು ಶೈಖಾ ಮರ್ಕಝ್ ಯೂತ್ ವೆಲ್ಫೇರ್ ಅಸೋಸಿಯೇಶನ್ ನ 19ನೇ ವಾಷಿಕಕೊತ್ಸವ ನೆನಪಿಗೆ ಅಬ್ಬು ಹಾಜಿ ಖುತುಬಿನಗರ ಕೊಡುಗೆಯಾಗಿ ನಿರ್ಮಿಸಿಕೊಟ್ಟ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಲೌಕಿಕ ವಿದ್ಯಾಭ್ಯಾಸದ ಜತೆ ಧಾರ್ಮಿಕ ವಿದ್ಯೆಗೆ ಮಹತ್ವ ನೀಡಿದಾಗ ಮಾತ್ರ ಇಸ್ಲಾಂ ಧರ್ಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ಹೇಳಿದರು.
ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆ ಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಮಾತನಾಡಿ ಕಿನ್ಯಾ ಗ್ರಾಮದಲ್ಲಿ ಇರುವ ಬಡ ಹೆಣ್ಣಿನ ಮದುವೆ, ಮನೆ ಕಟ್ಟಲು, ವಿದ್ಯಾಭ್ಯಾಸ ಮುಂತಾದ ವಿಚಾರದಲ್ಲಿ ಹೆಚ್ಚಿನ ಅಧ್ಯತೆವಹಿಸಿ ಬಡರಿಗೆ ಅಶಾಕಿರಣವಾಗಿ ಬೆಳೆದು ಬಂದಿದೆ ಎಂದು ಹೇಳಿದರು.

ಅಸೋಸಿಯೇಶನ್ ಅಧ್ಯಕ್ಷ ಕೆ.ಎ ಅಬೂಬಕ್ಕರ್ ಮಾತನಾಡಿದರು, ಖುತುಬಿ ನಗರ ಖತೀಬ್ ಶಫೀಕ್ ಸಅದಿ ವಿಷಯ ಮಂಡಿಸಿದರು.
ಈ ಸಂದರ್ಭ ಕಟ್ಟಡ ನಿರ್ಮಿಸಿಕೊಟ್ಟ ಅಬ್ಬು ಹಾಜಿಯವರನ್ನು ಸನ್ಮಾನಿಸಲಾಯಿತು.

ಕಿನ್ಯಾ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಕೆ.ಸಿ ನಗರ ಜುಮಾ ಮಸೀದಿ ಖತೀಬ್ ಹನೀಫ್ ಸಖಾಫಿ, ಅಸೋಸಿಯೇಶನ್ ಉಪಾಧ್ಯಕ್ಷ ಮುಸಾ ಕುಂಞ ಮೀನಾದಿ, ಕೆ.ಎಂ ಅಬ್ಬಾಸ್, ಜೊತೆ ಕಾರ್ಯದರ್ಶಿ ಸಿದ್ದೀಕ್ ಕಿನ್ಯಾ, ಕೋಶಾಧಿಕಾರಿ ರಝಾಕ್ ಪಾರೆ, ಸಂಚಾಲಕ ಇಬ್ರಾಹಿಂ ಮೀನಾದಿ, ಬದ್ರಿಯಾ ಜುಮಾ ಮಸೀದಿ ಖುತುಬಿಯನಗರ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ, ಖುತುಬಿಯ ನಗರ ಸಣ್ಣ ಮಸೀದಿ ಅಧ್ಯಕ್ಷ ಸಲಾಂ ಮುಂತಾದ ವರು ಈ ಸಂದರ್ಭ ಉಪಸ್ಥಿತರಿದ್ದರು.

Exit mobile version