Site icon Ullalavani

ಉಲಮಾಗಳು ತಮ್ಮ ಹೊಣೆಗಾರಿಕೆಗಳ ಕುರಿತು ಜಾಗೃತರಾಗಿರಬೇಕು: ಪೇರೋಡ್ ಸಖಾಫಿ

UN NETWORKS

ಉಪ್ಪಿನಂಗಡಿ : ಸಮಾಜಕ್ಕೆ ಸರಿಯಾದ ದಿಗ್ದರ್ಶನ ನೀಡಿ ಸತ್ಪಥಕ್ಕೆ ಕೊಂಡೊಯ್ಯುವ ಬಹಳ ದೊಡ್ಡ ಜವಾಬ್ದಾರಿಯು ಧಾರ್ಮಿಕ ವಿದ್ವಾಂಸರ ಮೇಲಿದ್ದು ಅದನ್ನು ನಿರ್ವಹಣೆ ಮಾಡಲು ಅಗತ್ಯವಾದ ಪ್ರಾಮಾಣಿಕತೆ, ಬಧ್ದತೆ, ಮತ್ತು ಪ್ರಾಯೋಗಿಕ ತರಬೇತಿ ಉಲಮಾಗಳಿಗೆ ಅನಿವಾರ್ಯ ವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಕಾರ್ಯದರ್ಶಿ ಮೌಲಾನಾ ಪೆರೋಡ್ ಅಬ್ದುಲ್ರಹ್ಮಾನ್ ಸಖಾಫಿ ಪ್ರಸ್ತಾಪಿಸಿದರು.

ಕರ್ನಾಟಕ ಜಂಇಯ್ಯತುಲ್ ಉಲಮಾದ ವತಿಯಿಂದ ಉಪ್ಪಿನಂಗಡಿ ತಾಜುಲ್ ಉಲಮಾ ವೇದಿಕೆಯಲ್ಲಿ ಹಮ್ಮಿಕೊಂಡ ಬೃಹತ್ ಉಲಮಾ ಕಾನ್ಫರೆನ್ಸ್ ನ ಉದ್ಘಾಟನಾ ಸಂಗಮದಲ್ಲಿ ಅವರು “ಉಲಮಾಗಳ ಜವಾಬ್ದಾರಿ” ಎಂಬ ವಿಷಯ ದಲ್ಲಿ ಉಪನ್ಯಾಸ ಮಾಡುತ್ತಿದ್ದರು.

ಆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡ ಉಲಮಾ ಕಾನ್ಫರೆನ್ಸ್ ಕಾಲ ಘಟ್ಟದ ಬಲು ದೊಡ್ಡ ಬೇಡಿಕೆಯ ಈಡೇರಿಕೆಗೆ ಸಮರ್ಪಕ ಹೆಜ್ಜೆ ಯಾಗಿದ್ದು ಉಲಮಾಗಳ ನಾಯಕತ್ವದಲ್ಲಿ ಸಮುದಾಯವು ಪರಂಪರಾಗತ ಅಹ್ಲುಸ್ಸುನ್ನತಿ ವಲ್ ಜಮಾ ಅತಿನ ತತ್ವಾದರ್ಶಗಳ ತಳಹದಿಯಲ್ಲಿ ಒಗ್ಗಟ್ಟಿನಲ್ಲಿ ಮುಂದುವರಿಯ ಬೇಕೆಂದು ಅವರು ಕರೆ ನೀಡಿದರು.

ಸಮಾವೇಶದಲ್ಲಿ ಕರ್ನಾಟಕ ಸುನ್ನೀ ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷ ತೆ ವಹಿಸಿದರು. ರಾಜ್ಯ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು, ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಸಂದೇಶ ಭಾಷಣ ಮಾಡಿದರು.

ಎಸ್.ವೈ.ಎಸ್. ರಾಜ್ಯ ಅಧ್ಯಕ್ಷ ಕೆ.ಪಿ ಹುಸೈನ್ ಸ ಅದಿ ಕೆಸಿರೋಡ್, ಕೃಷ್ಣಾಪುರ ಖಾಝಿ ಇ.ಕೆ ಇಬ್ರಾಹಿಂ ಮದನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಮದನಿ, ಕರ್ನಾಟಕ ವಖ್ಫ್ ಬೋರ್ಡ್ ನಿರ್ದೇಶಕ ಹಾಗೂ ಇಹ್ಸಾನ್ ಕರ್ನಾಟಕ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಕರ್ನಾಟಕ ಹಜ್ ಕಮಿಟಿ ಸದಸ್ಯ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕಕರ್ ಸಿದ್ದೀಖ್ , ಎಸ್ ಇ.ಡಿ.ಸಿ.ರಾಜ್ಯಾ ಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ , ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಅಖಿಲ ಭಾರತ ಸಂಚಾಲಕ ಡಾಮೌಲಾನಾ ಫಾ ಝಿಲ್ ರಝ್ವಿ ಕಾವಲಕಟ್ಟೆ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಮನ್ಶರ್ ತಂಙಳ್ ,ಶುಭ ಕೋರಿದರು.

ಕೆಸಿಎಪ್ ಸೌದಿ ಅರೇಬಿಯಾ ಘಟಕ ಹೊರತಂದ “ಪ್ರವಾಸಿ ಗೈಡ್” ಎಂಬ ಪುಸ್ತಕ ವನ್ನು ಜಂಇಯ್ಯತುಲ್ ಉಲಮಾ ರಾಜ್ಯ ಉಪಾಧ್ಯಕ್ಷ ವಳವೂರು ಮುಹಮ್ಮದ್ ಸಅದಿ , ಎಸ್. ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿಕೆ ಉಮರ್ ಸಖಾಫಿಗೆ ನೀಡಿ ಬಿಡುಗಡೆ ಮಾಡಿದರು.

ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಎಸ್ ಪಿ. ಹಂಝ ಸಖಾಫಿ ಸ್ವಾಗತಿಸಿ ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಧನ್ಯವಾದ ಸಲ್ಲಿಸಿದರು, ಪ್ರೊಗ್ರಾಮ್ ಸಮಿತಿ ಸಂಚಾಲಕ ಅಬ್ದುಲ್ರಶೀದ್ ಝೈನೀ ಕಾಮಿಲ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version