UN NETWORKS
ತೊಕ್ಕೊಟ್ಟು: ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ಶತಮಾನೋತ್ಸವ ವರ್ಷದ ಅಂಗವಾಗಿ ಸಿ.ಎಲ್.ಸಿ. ಪೆರ್ಮನ್ನೂರು ಇದರ ವತಿಯಿಂದ ಕುಟುಂಬ ಸಂಭ್ರಮ ಕಾರ್ಯಕ್ರಮ ಧರ್ಮಕೇಂದ್ರದ ಮೈದಾನದಲ್ಲಿ ನಡೆಯಿತು.
ಅಂತರಾಷ್ಟ್ರೀಯ`ಮಿಸ್ಟರ್ ವಲ್ರ್ಡ್’ ಖ್ಯಾತಿಯ ಬಾಡಿ ಬಿಲ್ಡರ್ ರೈಮಂಡ್ ಡಿ’ಸೋಜಾ, ಬಾಡಿ ಬಿಲ್ಡರ್ಸ್ ಎಸೋಸಿಯೇಶನ್‍ನ ಅಧ್ಯಕ್ಷ ಭಾಸ್ಕರ ತೊಕ್ಕೊಟ್ಟು, ಅಂತರರಾಷ್ಟ್ರೀಯ ಪವರ್ ಲಿಫ್ಟರ್ ಗೀತಾ ಬಾಯಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಾಡಿ ಬಿಲ್ಡರ್ ರೋಶನ್ ಫೆರಾವೋ ಇವರನ್ನು ಸನ್ಮಾನಿಸಿದರು.
ಧರ್ಮಕೇಂದ್ರದ ಪ್ರಧಾನಗುರು ಫಾದರ್ ಜೆ.ಬಿ. ಸಲ್ದಾನ ಅವರ ಸನ್ಮಾನ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಚರ್ಚ್‍ನ ವಿವಿಧ ವಾರ್ಡ್‍ನವರಿಗೆ ಸ್ಪರ್ಧೆ ಏರ್ಪಡಿಸಲಾಯಿತು.