Site icon Ullalavani

ಉಳ್ಳಾಲಬೈಲ್ : ತೂಭಾ ಫರ್ನಿಚರ್ಸ್ ಷೋರೂಂ ಉದ್ಘಾಟನೆ

UN NETWORKS

ಉಳ್ಳಾಲ: ಉಳ್ಳಾಲಬೈಲಿನ ಮಾತಾ ಕಾಂಪ್ಲೆಕ್ಸ್‍ನಲ್ಲಿ  ನೂತನವಾಗಿ ಶುಭಾರಂಭಗೊಂಡ  ` ತೂಭಾ ಫರ್ನಿಚರ್ಸ್ ‘ ಮಿತದರದ ಫರ್ನಿಚರ್ ಮಾರಾಟದ ಮಳಿಗೆಯ ಷೋರೂಂನ   ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಮೊಹಮ್ಮದ್ ಶಮೀಮ್ ಸಖಾಫಿ  ದುಆ  ನೆರವೇರಿಸಿದರು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ   ಹಾಜಿ ಅಬ್ದುಲ್ ರಶೀದ್ ಮಾತನಾಡಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಉಳ್ಳಾಲದಲ್ಲಿ ವಸತಿ ಸಂಕೀರ್ಣಗಳು ಹೆಚ್ಚುತ್ತಿದ್ದು, ಅವರ ಮನೆಗಳಿಗೆ  ಫರ್ನಿಚರ್‍ಗಾಗಿ  ಮಂಗಳೂರಿಗೆ ಅಲೆದಾಡಬೇಕಾದ ಅನಿವಾರ್ಯತೆಯಿಲ್ಲ. ಉಳ್ಳಾಲ ಬೈಲಿನ ತೂಭಾ ಫರ್ನಿಚರ್ ಅಂಗಡಿಯಿಂದಲೇ ಮಿತದರದಲ್ಲಿ ಪಡೆಯುವಂತಹ ವ್ಯವಸ್ಥೆ ಆಗಿದೆ.  ವ್ಯಾಪಾರಸ್ಥರು ವ್ಯಾವಹಾರಿಕವಾಗಿ ಮಾತ್ರ  ಒಗ್ಗಿಕೊಳ್ಳದೆ ಸಾಮರಸ್ಯ  ಹಾಗೂ ಶಾಂತಿಯ ಉಳ್ಳಾಲವನ್ನು ರೂಪಿಸುವಲ್ಲಿ  ಸಹಕರಿಸಬೇಕಿದೆ  ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಉಳ್ಳಾಲದಲ್ಲಿ  ತೂಭಾ ಫರ್ನಿಚರ್ ಮಳಿಗೆ ಆರಂಭಗೊಳ್ಳುವ ಮೂಲಕ ಉಳ್ಳಾಲ ಭಾಗದ ಜನರಿಗೆ ವಿವಿಧ ವಿನ್ಯಾಸಗಳ  ಫರ್ನಿಚರ್ ಸೊತ್ತುಗಳು  ಲಭ್ಯವಾಗಲಿದೆ.  ಸಂಸ್ಥೆ ಇನ್ನಷ್ಟು  ಶಾಖೆಗಳನ್ನು ತೆರೆದುಕೊಳ್ಳುವ ಮೂಲಕ ಅಭಿವೃದ್ಧಿಯಾಗಲಿ ಎಂದರು.
ತುಳು ಚಲನಚಿತ್ರ ನಟಿ ಸುವರ್ಣಾ ಶೆಟ್ಟಿ  ಮಂಗಳೂರು ತೂಭಾ ಫರ್ನಿಚರ್ಸ್ ಷೋ ರೂಂ ಉದ್ಘಾಟಿಸಿದರು.
ಉಳ್ಳಾಲ ಮೊಯ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯರಾದ  ಫಾರುಕ್ ಉಳ್ಳಾಲ್,  ಕಟ್ಟಡಜ ಮಾಲೀಕ ಮಾಧವ ಶೆಟ್ಟಿ,  ಪೆರಿಬೈಲು ಜುಮಾ ಮಸೀದಿಯ  ಉಮ್ಮರ್ ಫಾರುಕ್ ಪೆರಿಬೈಲ್ ಮುಖ್ಯ ಅತಿಥಿಗಳಾಗಿದ್ದರು.  ಸಂಸ್ಥೆಯ ಪಾಲುದಾರರಾದ ಹಮ್ಮಬ್ಬ ಮತ್ತು ಮಹಮ್ಮದ್ ಅಶ್ರಫ್ ಬೀರಿ ಉಪಸ್ಥಿತರಿದ್ದರು.
ನಟಿ ಚೈತ್ರಾ ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
15,000 ಮೇಲ್ಪಟ್ಟ ಖರೀದಿಗೆ ಬಹುಮಾನ
ಫರ್ನಿಚರ್ ಖರೀದಿಯಲ್ಲಿ ರೂ.15,000 ಕ್ಕಿಂತ ಮೇಲ್ಪಟ್ಟ  ಸೊತ್ತುಗಳ ಖರೀದಿ ಮಾಡಿದಲ್ಲಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಪಾಲುದಾರ  ಹಮ್ಮಬ್ಬ ತಿಳಿಸಿದ್ದಾರೆ.

????????????????????????????

 

Exit mobile version