UN NETWORKS
ತೊಕ್ಕೊಟ್ಟು: ಶ್ರೀಮಂತರು ಬಡವರನ್ನು ಗುರುತಿಸಿ ಸಹಾಯ ಮಾಡಲಿ ಎಂದು ಕರೆ ನೀಡುವ ಇಸ್ಲಾಂ ಧರ್ಮ ಭಿಕ್ಷಾಟನೆಗೆ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ ಎಂದು ಮಲ್ ಜಅಹ್ ಸಂಸ್ಥೆಯ ಶಿಲ್ಪಿ ಅಸಯ್ಯದ್ ಜಲಾಲುದ್ದೀನ್ ಅಲ್-ಹಾದಿ ಉಜಿರೆ ತಂಙಳ್ ಹೇಳಿದ್ದಾರೆ.
ಅವರು ಕುಂಪಲದ ಎಮ್.ಆರ್ ಪ್ಯಾಲೇಸ್ ನಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಶುಕ್ರವಾರ ನಡೆದ ಬಡ ಕುಟುಂಬದ ಹೆಣ್ಣಿನ ಮದುವೆಗೆ ಚಿನ್ನ ವಿತರಣೆ ಮತ್ತು ಪ್ರಾರ್ಥನಾ ಸಂಗಮದ ನೇತ್ರತ್ವ ವಹಿಸಿ ಮಾತನಾಡಿದರು.
ಇಸ್ಲಾಮಿನ ನಿಯಮ ಪ್ರಕಾರ ಶ್ರೀಮಂತರು ತನ್ನ ಆಸ್ತಿಯ ಎರಡು ಶೇಕಡಾ ಅರ್ಹ ಬಡವನನ್ನು ಗುರುತಿಸಿ ನೀಡಬೇಕು. ಅದರೆ ಇಂದು ಬಡವ ಸಹಾಯ ಯಾಚಿಸಿಲು ಶ್ರೀಮಂತರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು ಇದು ಸರಿಯಲ್ಲ. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ನ ಈ ಸೇವೆಯ ಮಹತ್ವ ತಿಳಿದು ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಸಂಘಟನೆ ಎರಡು ವರ್ಷಗಳಲ್ಲಿ ಸುಮಾರು 40ಲಕ್ಷ ರೂಪಾಯಿ ಬಡ ಅರ್ಹ ರಿಗೆ ನೀಡುವ ಮೂಲಕ ತೊಕ್ಕೋಟ್ಟು ಸೆಕ್ಟರ್ ದೇಶಕ್ಕೆ ಮಾದರಿಯಾಗಿದೆ. ಈ ಸೆಕ್ಟರ್ ನ ಚೇರ್‍ಮೆನ್ ಅಲ್ತಾಫ್ ಕುಂಪಲ ಇವರಿಗೆ ಇನ್ನೂ ಸಮಾಜಸೇವೆ ಮಾಡಲು ಅಲ್ಲಾಹನು ಹೆಚ್ಚು ಶಕ್ತಿ ನೀಡಲಿ ಎಂದು ಹಾರೈಸಿದರು.
ಉದ್ಯಮಿ ಅಬ್ಬಾಸ್ ಹಾಜಿ ಕೋಟೆಪುರ ಬಡ ಹೆಣ್ಣಿನ ಮದುವೆಗೆ ಚಿನ್ನ ವಿತರಿಸಿದರು. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದರು.ಉದ್ಯಮಿ ಇಕ್ಬಾಲ್ ಹಾಜಿ ಕುಂಪಲ, ಉಳ್ಳಾಲ ನಗರ ಸಭೆ ಸದಸ್ಯ ಅಶ್ರಫ್ ಬಾವ ಕೋಡಿ, ಮುಹಮ್ಮದ್ ಕುಂಪಲ, ಎಸ್ ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲುದ್ದೀನ್ ತಂಙಳ್, ಎಸ್ ವೈಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಲಿಕೆ, ತೊಕ್ಕೊಟ್ಟು ಸೆಕ್ಟರ್ ಉಪಾಧ್ಯಕ್ಷ ಶಮೀರ್ ಸೆವಂತಿಗುಡ್ಡೆ, ಪ್ರ.ಕಾರ್ಯದರ್ಶಿ ಮುಝಮ್ಮಿಲ್ ಕೋಡಿ, ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್ ಪ್ರ. ಕಾರ್ಯದರ್ಶಿ ನಿಝಾಮ್, ಉದ್ಯಮಿ ಉಮರಬ್ಬ ತೊಕ್ಕೊಟ್ಟು, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಹೈಸ್ಕೂಲ್ ಕನ್ವೀನರ್ ಬಿ.ಎಸ್ ಇಸ್ಮಾಯಿಲ್ ಕುತ್ತಾರು, ಕಾರ್ಯದರ್ಶಿ ಮನ್ಸೂರ್ ದಾರಂದಬಾಗಿಲು ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಚೇರ್ ಮ್ಯಾನ್ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು.