Site icon Ullalavani

ಮಾದಕದ್ರವ್ಯ ಮಾರಾಟಗಾರರಿಗೆ ರೌಡಿಗಳಿಗೆ ರಾಜ್ಯಸರಕಾರದ ಸಹಕಾರ : ಮೋನಪ್ಪ ಭಂಡಾರಿ

UN NETWORKS

ಉಳ್ಳಾಲ : ಜಿಲ್ಲೆಯಲ್ಲಿ ಮಾದಕದ್ರವ್ಯ ಮಾರಾಟಗಾರರಿಗೆ ಮತ್ತು ರೌಡಿಗಳಿಗೆ ಸಹಕಾರ ನೀಡುವ ಮೂಲಕ ರಾಜ್ಯ ಸರಕಾರ ಪೊಲೀಸರಿಗೆ ಕರ್ತವ್ಯ ನಡೆಸಲು ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಚೂರಿ ಇರಿತ ಕೊಲೆಗಳಾಗುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ.

ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಕಾಂಗ್ರೆಸ್‍ನ ದುರಾಡಳಿತ, ಸಚಿವ ಖಾದರ್ ಅವರ ಅಸಮರ್ಥತನದ ವಿರುದ್ಧ ಬಿಜೆಪಿ ಕಾರ್ಯಕರ್ತ ಝುಬೇರ್ ಹತ್ಯೆ ವಿರೋಧಿಸಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಕೊಲೆಗಡುಕ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ. , ಕಲಬುರ್ಗಿ, ಗೌರೀ ಲಂಕೇಶ್ ಕೊಲೆಯಾದರೂ ಕೊಲೆಗಡುಕರು ಪತ್ತೆಯಾಗಿಲ್ಲ ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗುತ್ತಿದೆ . ಕೋಮು ಸೌಹಾರ್ದ ಇದ್ದ ಜಿಲ್ಲೆಯನ್ನು ಕಾಂಗ್ರೆಸ್ ಸಿದ್ಧರಾಮಯ್ಯ ಆಡಳಿತಕ್ಕೆ ಬಂದ ನಂತರ ಜಿಲ್ಲೆ ಕೋಮು ಸೌಹಾರ್ದತೆಯನ್ನು ಕದಡಿದೆ. ಒಂದು ವರ್ಗ, ಕೊಲೆಗಡುಕರನ್ನು, ಮಾದಕ ದ್ಯವ್ಯ ಆರೋಪಿಗಳನ್ನು ಓಲೈಸುವುದರಿಂದ ಸ್ಥಾನ ಭದ್ರವಾಗಿ ಉಳಿಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಂತವರಿಗೆ ಬೆಂಬಲ ನೀಡುವ ಮೂಲಕ ಪೊಲೀಸರನ್ನು ನಿಯಂತ್ರಿಸುವ ಕಾರ್ಯ ನಡೆಸುತ್ತಿದೆ.

ಇದಕ್ಕೆ ಜಿಲ್ಲೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕರು, ಮಂತ್ರಿಗಳು ಸಹಕಾರ ನೀಡುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತನ ಹತ್ಯೆ ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯ ಕೃಪಾಕಟಾಕ್ಷವಿಲ್ಲದೆ ಈ ರೀತಿ ಕೊಲೆ ಮಾಡಲು ಸಾಧ್ಯವಿಲ್ಲ. ಕೊಲೆ ನಡೆಸಿರುವ ಟಾರ್ಗೆಟ್ ಗ್ರೂಪ್‍ನ ಮುಖಂಡ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷ ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ಮಾತನಾಡಿ ಸಮಾಜದ ಒಳಿತಿಗಾಗಿ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತನನ್ನು ಜನರ ಎದುರೇ ಕಡಿದು ಕೊಂದಿರುವುದು ಕೊಲೆಗಡುಕರು ಮನುಷ್ಯರಲ್ಲ. ಕ್ಷೇತ್ರದ ವ್ಯಕ್ತಿಯ ಕುಟುಂಬಕ್ಕೆ ಸಚಿವ ಖಾದರ್ ಆಗಮಿಸಿ ಸಾಂತ್ವನ ಹೇಳಿಲ್ಲ. ಕ್ಷೇತ್ರದ ಶಾಸಕರೂ, ಸಚಿವರಾಗಿರುವ ಖಾದರ್ ಹಿಂದೆ ಇದ್ದವರೇ ಕೊಲೆ ನಡೆಸಿದವರಾಗಿದ್ದು, ಜಿಲ್ಲೆಯನ್ನು ಮಾದಕ ವ್ಯಸನ ಜಿಲ್ಲೆಯಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲದಿಂದ ಜಿಲ್ಲೆಯಲ್ಲಿ ಕೊಲೆಗಳು ನಡೆಯುತ್ತಿದೆ. ಇಲ್ಲಿನ ಸಚಿವರಿಂದ ಪೊಲೀಸರು ಸರಿಯಾಗಿ ಕರ್ತವ್ಯ ನಡೆಸಲು ಸಾದ್ಯವಾಗುತ್ತಿಲ್ಲ. ಮಾದಕ ಜಿಲ್ಲೆಯಾಗುತ್ತಿರುವ ಜಿಲ್ಲೆಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಅಗತ್ಯವಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗೆ ನ್ಯಾಯ ನೀಡುವ ಅಗತ್ಯವಿದೆ. ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಯೂ ಪಕ್ಕದ ಜಿಲ್ಲೆ ದ.ಕ.ಜಿಲ್ಲೆಯಲ್ಲೂ ರಾಜಕೀಯ ಹತ್ಯೆ ಮುಂದುವರೆಯುತ್ತಿದೆ ಕರ್ನಾಟಕ ರಾಜ್ಯ ಬಿಹಾರ ಮಾದರಿಯಲ್ಲಿ ಗೂಂಡಾ ರಾಜ್ಯ ಸೃಷ್ಟಿಯಾಗುತ್ತಿದೆ ಎಂದರು. ಹತ್ತು ಲಕ್ಷ ರೂ. ಪರಿಹಾರ ಕೊಡಬೇಕು ಎಂದರು.

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಝುಬೇರ್‍ನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ ಅದರೇ ಅವರ ಹೆಸರಲ್ಲಿ ಒಂದೇ ಒಂದು ಕೇಸು ದಾಖಲೆಯಾಗಿಲ್ಲ ಆದರೆ ಕಾಂಗ್ರೆಸ್ ಮುಖಂಡ ಜಿ.ಎ. ಭಾವಾ ಅವರು ಝುಬೇರ್ ರೌಡಿ ಶೀಟರ್ ಎನ್ನುವ ಪಟ್ಟ ನೀಡುತ್ತಾರೆ. ಇದರ ವಿರುದ್ಧ ಮಾಹಿತಿ ಹಕ್ಕಿನಲ್ಲಿ ಹಾಕಿ ಪ್ರಕರಣ ದಾಖಲಿಸುತ್ತೇವೆ.

ಮಂಗಳೂರು ಕ್ಷೇತ್ರದಲ್ಲಿ ಓಟಿಗಾಗಿ ಗಾಂಜಾ ವ್ಯವಸನಿಗಳನ್ನು ಘೋಷಿಸಲಾಗುತ್ತಿದ್ದು, ಇವರಿಂದ ಹಾಡುಹಗಲೇ ಕೊಚ್ಚಿ ಕೊಲೆ ಮಡುತ್ತಿದ್ದು, ಇವರನ್ನು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಬೆಂಬಲ ನೀಡುತ್ತಿದ್ದಾರೆ. ಆರೋಪಿಗಳನ್ನು ಯೂತ್ ಕಾಂಗ್ರೆಸ್‍ನ ಮುಖಂಡರು ಠಾಣೆಗೆ ಹಾಜರು ಪಡಿಸಲು ಸಿದ್ಧರಾಗಿದ್ದಾರ. ಅವರ ಮೈಮುಟ್ಟದೆ ಅವರಿಗೆ ಜಾಮೀನು ನೀಡಲು ಕಾಂಗ್ರೆಸ್ ಪ್ರೇರಿತ ವ್ಯಕ್ತಿಗಳು ಸಿದ್ಧರಾಗಿದ್ದಾರೆ. ಆದರೆ ಉಳ್ಳಾಲ ಪೊಲೀಸರು ಅಸಮರ್ಥರಲ್ಲ ಆರೋಪಿಗಳನ್ನು ತಡವಾದರೂ ಸರಿ ಪೊಲೀಸರೇ ಬಂ„ಸಲಿ ಬಳಿಕ ಅವರಿಗೆ ಕಠಿಣ ಶಿಕ್ಷೆ ನೀಡಲಿ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಭಾರತೀಯ ಜನಾತಾ ಪಾರ್ಟಿ ಯಾವುದೇ ಪಕ್ಷಕ್ಕೆ ಸೀಮಿತವಾದ ಪಕ್ಷವಲ್ಲ ಎಲ್ಲಾ ವರ್ಗದವರ ರಕ್ಷಣೆ ಬಾಜಾಪದ ಕಾರ್ಯ ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಅಲ್ಪ ಸಂಖ್ಯಾತ ಹೆಸರಲ್ಲಿ ಮತ ಪಡೆದಿರುವ ಯು.ಟಿ.ಖಾದರ್ ಅವರ ಮೂಗಿನ ನೇರದಲ್ಲೇ ಅವರದೇ ಆದ ಸಮುದಾಯದವರ ಹತ್ಯೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದಲ್ಲಿ ರಾಜಿನಾಮೆ ನೀಡಿ. ರಾಜ್ಯದಲ್ಲಿ ಪಡಿತರ ಸಮಸ್ಯೆಯೊಂದಿಗೆ ಮರಳು ಸಮಸ್ಯೆ ಹೆಚ್ಚಾಗಿದೆ. ಎಂದ ಅವರು ಝುಬೇರ್ ಕುಟುಂಬಕ್ಕೆ ಸರಕಾರದಿಂದ ಸವಲತ್ತು ನೀಡಬೇಕು ಎಂದರು

ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಹಿರಿಯ ಮುಖಂಡ ಟಿ.ಜಿ.ರಾಜಾರಾಮ್ ಭಟ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ನಿತಿನ್ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರಾಮಚಂದ್ರ ಕುಂಪಲ, ರವಿಶಂಕರ್, ನವೀನ್ ಪಾದಲ್ಪಾಡಿ, ಅಲ್ಪ ಸಂಖ್ಯಾತ ಜಿಲ್ಲಾ ಅಧ್ಯಕ್ಷ ಜಾಯ್ಲೆಸ್ ಡಿ’ಸೋಜಾ, ಕ್ಷೇತ್ರಾಧ್ಯಕ್ಷ ಅಶ್ರಫ್ ಹರೇಕಳ, ಜಿಲ್ಲಾ ಉಪಾಧ್ಯಕ್ಷ ಉಸ್ಮಾನ್ ಬಂಟ್ವಾಳ, ಪ್ರ.ಕಾರ್ಯದರ್ಶಿಗಳಾದ ಮುನೀರ್ ಬಾವ, ಅಝೀಝ್ ಫ್ಯಾನ್ಸಿ, ,ಮುಖಂಡರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಬಾಬು ಬಂಗೇರ, ಲಲಿತಾ ಸುಂದರ್, ಯಶವಂತ ಅಮೀನ್, ಮಹಾಲಕ್ಷ್ಮಿ, ಭಗವಾನ್‍ದಾಸ್, ನಿತಿನ್ ಗಟ್ಟಿ ಕುರ್ನಾಡು, ಜಗದೀಶ್ ಆಲ್ವ ಕುವೆತ್ತ ಬೈಲು, ರಾಜೇಶ್ ಶೆಟ್ಟಿ ಪಜೀರು ರಮಣಿ ಸೋಮೇಶ್ವರ, ಮೋಹನ್ ರಾಜ್ ಕನೀರ್ ತೋಟ, ಮಹಮ್ಮದ್ ಅಸ್ಗರ್, ಸಚಿನ್ ಶೆಟ್ಟಿ ಸಾಂತ್ಯ, ಸುರೇಶ್ ಆಳ್ವ, ಇಸ್ಮಾಯಿಲ್ ಪೂಮಣ್ಣು, ಫಾರೂಕ್ ತಲಪಾಡಿ, ಪೊಡಿಮೋನು, ಆನಂದ ಶೆಟ್ಟಿ, ನಮಿತಾ ಶ್ಯಾಂ, ಮುನೀರ್ ಮಾಸ್ಟರ್, ಗೀತಾ ಬಾೈ, ಜೀವನ್ ತೊಕ್ಕೊಟ್ಟು, ಜಯಶ್ರೀ ಕರ್ಕೇರ, ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು ಅಜಿತ್ ತೊಕ್ಕೊಟ್ಟು, ಪ್ರಕಾಶ್ ಸಿಂಪೋನಿ, ಫಝಲ್ ಅಸೈಗೋಳಿ ಉಪಸ್ಥಿತರಿದ್ದರು.

ಕ್ಷೇತ್ರ ಪ್ರ. ಕಾರ್ಯದರ್ಶಿ ಮೋಹನ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version