UN NETWORKS
ಉಳ್ಳಾಲ: ಸಯ್ಯದ್ ಮದನಿ ಉಳ್ಳಾಲ ದರ್ಗಾ ಆಡಳಿತ ಸಮಿತಿ ಪ್ರಮುಖರು ಅದ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರ ನೇತೃತ್ವದಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ನೀಡಿ ಸಯ್ಯದ್ ಮದನಿ ದರ್ಗಾ ಅಧೀನದಲ್ಲಿ ಸರ್ವ ಧರ್ಮದವರಿಗೆ ಸಹಕಾರಿಯಾಗುವಂತೆ ಹಲವಾರು ವಿದ್ಯಾಸಂಸ್ಥೆಗಳು ಕಾರ್ಯಚರಿಸುತ್ತಿರುವುದರ ಕುರಿತು ವಿವರಿಸಿ ಸರ್ಕಾರದ ವತಿಯಿಂದ ಪೂರ್ಣ ಸಹಕಾರವನ್ನು ಕೋರಿದರು.
ನಿಯೋಗದಲ್ಲಿ ದರ್ಗಾ ಸಮಿತಿ ಪ್ರ.ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ ಕೆ ಮೊಯಿದೀನ್ ಇನ್ನಿತರರು ಉಪಸ್ಥಿತರಿದ್ದರು.
( ಇತ್ತೀಚೆಗೆ ಉಳ್ಳಾಲದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಜುಬೈರ್ ರವರ ಹಂತಕರನ್ನ ಆದಷ್ಟು ಭೇಗ ಬಂಧಿಸಿ ಕಾನೂನು ಸುವ್ಯವಸ್ಥೆ ಭದ್ರಪಡಿಸಬೇಕಾಗಿ ನಿಯೋಗವು ಮುಖ್ಯಮಂತ್ರಿಯವರಲ್ಲಿ ಮನವಿ ಸಲ್ಲಿಸಿತು.)