Site icon Ullalavani

ಕೋಟೆಕಾರ್: ರಸ್ತೆ ಕಾಂಕ್ರಿಟಿಕರಣಕ್ಕೆ ಚಾಲನೆ

UN NETWORKS

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮಡ್ಯಾರು, ಪನೀರು ಹಾಗೂ ಸಂಕೊಳಿಗೆ ಪ್ರದೇಶಗಳ ಕೆಲವು ರಸ್ತೆಗೆ ಕಾಂಕ್ರೇಟಿಕರಣಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರು ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಿದ್ದರ ಫಲ ಇದಾಗಿದ್ದು ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕಾಗಿದೆ ಅದಲ್ಲದೆ ಕೌನ್ಸಿಲರ್‍ರವರಿಗೆ ಇನ್ನೂ ಕಾಲ ಮಿಂಚಿಲ್ಲ ಬಾಕಿ ಉಳಿದ ಕಾಮಗಾರಿಗಳಿಗೆ ಶಾಸಕರ ಸಂಸದರಲ್ಲಿ ಮನವಿ ಮಂಡಿಸಿ ಕೆಲಸ ಪೂರ್ತಿಗೊಳಿಸಬೇಕು ಎಂದು ಹೇಳಿದರು. ಮಾತ್ರವಲ್ಲದೆ ತಕ್ಷಣವೇ ಕೆಲಸ ಪ್ರಾರಂಭಿಸಲು ಗುತ್ತಿಗೆದಾರರನ್ನು ಒತ್ತಾಯಿಸಿ ಕಾಮಗಾರಿಯ ಗುಣಮಟ್ಟವನ್ನು ಗ್ರಾಮಸ್ಥರು ಆಗಾಗ್ಗೆ ಪರೀಕ್ಷಿಸುತ್ತಿರಬೇಕೆಂದು ಈ ಸಂದರ್ಭ ಹೇಳಿದರು.

ಮಡ್ಯಾರ್‍ನಲ್ಲಿ 2ಲಕ್ಷ, ಪನೀರ್‍ನಲ್ಲಿ 4 ಲಕ್ಷ, ಸಂಕೊಳಿಗೆಯಲ್ಲಿ ತಲಾ 2ಲಕ್ಷ ಹಾಗೂ 3ಲಕ್ಷ ರೂ. ಹೀಗೆ ಸುಮಾರು 11 ಲಕ್ಷ ಅನುದಾನದ ಕಾಮಗಾರಿಗಳು ಇದಾಗಿದ್ದು ಕಾರ್ಪೋರೇಟರ್ ದಿವ್ಯ ಸತೀಶ್ ಶೆಟ್ಟಿಯವರ 6 ಲಕ್ಷ ಅನುದಾನ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರ ಅನುದಾನದೊಂದಿಗೆ ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಂಡಿತು.

ಬಳಿಕ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಕುಂಪಲ ಪಟ್ಟಣ ಪಂಚಾಯತ್ ಸದಸ್ಯರಾದ ದಿವ್ಯ ಸತೀಶ್ ಶೆಟ್ಟಿಯವರ ಕಾರ್ಯಕ್ಕೆ ಶ್ಲಾಘಿಸಿದರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರ ಶೇಖರ್ ಉಚ್ಚಿಲ್ ಮಾತನಾಡಿ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಮತ ಕೇಳಲು ಬಂದಾಗ ಕೊಟ್ಟ ಆಶ್ವಾಸನೆಯನ್ನು ಇದೀಗ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಪೂರ್ತಿಗೊಳಿಸಲು ಮುಂದಾಗಿರುವುದು ಸಂತಸದ ವಿಷಯ ಎಂದು ಪ್ರಶಂಶೆ ವ್ಯಕ್ತಪಡಿಸಿದರು, ಬಳಿಕ ಗ್ರಾಮಸ್ಥರು ತಮ್ಮ ಇತರೆ ಬೇಡಿಕೆಗಳನ್ನು ಪ್ರತಿನಿಧಿಗಳ ಮುಂದಿಟ್ಟಾಗ ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಯರಾಮ್ ಶೆಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್‍ರಾಜ್ ಕೆ.ಆರ್, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಸುಳ್ಳೆಂಜೀರು, ಉಪಾಧ್ಯಕ್ಷರಾದ ಅನಿಲ್ ಕುಮಾರ್ ಬಗಂಬಿಲ, ಸದಸ್ಯರಾದ ದಿವ್ಯ ಸತೀಶ್ ಶೆಟ್ಟಿ, ಧೀರಜ್ ಕೊಂಡಾಣ, ಮೋಹನ್ ಬಲ್ಯ, ಗುತ್ತಿಗೆದಾರರಾದ ಹೇಮಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Exit mobile version