Site icon Ullalavani

ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ರಿಕ್ಷಾ ಚಾಲಕ ಆತ್ಮಹತ್ಯೆ

UN NETWORKS

ಉಳ್ಳಾಲ: ಸೇತುವೆಯಿಂದ ನದಿಗೆ ಹಾರಿ ರಿಕ್ಷಾ ಚಾಲಕರೋರ್ವರು ಆತ್ಮಹತ್ಯೆ ನಡೆಸಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಗುರುವಾರ ನಡೆದಿದೆ.

ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ರಿಕ್ಷಾ ಸೇತುವೆಯ ಆರಂಭದಲ್ಲಿ ನಿಂತಿತ್ತು. ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ನೋಡನೋಡುತ್ತಿದ್ದಂತೆ ರಿಕ್ಷಾದಲ್ಲಿದ್ದ ಚಾಲಕ, ದಿಢೀರನೇ ರಿಕ್ಷಾದಿಂದ ಇಳಿದು ಸೇತುವೆಯಿಂದ ನೇರವಾಗಿ ನದಿಗೆ ಹಾರಿದ್ದ. ಹಾರಿದ ಕೆಲವೇ ಕ್ಷಣಗಳಲ್ಲಿ ಚಾಲಕ ನದಿ ನೀರಿನಲ್ಲಿ ಮುಳುಗಿದ್ದರು. ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಚಾಲಕ ನದಿ ಪಾಲಾಗಿದ್ದ. ಘಟನೆ ಬಳಿಕ ಸೇತುವೆಯಲ್ಲಿ ಜನ ಜಮಾಯಿಸಿದ್ದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

ರಿಕ್ಷಾದಲ್ಲಿ ಸಿಕ್ಕ ದಾಖಲೆಯಂತೆ, ವಾಹನ ಕೋಡಿಕಲ್ ಅಶೋಕನಗರದ ಬಶೀರ್ ಅಹಮ್ಮದ್ ಎಂಬವರಿಗೆ ಸೇರಿದ್ದಾಗಿದೆ. ಅವರೇ ಚಾಲಕರಾಗಿದ್ದರೇ ಅಥವಾ ಬೇರೆ ಚಾಲಕರಿಗೆ ಬಾಡಿಗೆ ನೀಡಿದ್ದರೇ ಅನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Exit mobile version