UN NETWORKS
ಉಳ್ಳಾಲ: ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ 17ನೇ ವರ್ಷದ ಕುಸ್ತಿ ಪಂದ್ಯಾಟದಲ್ಲಿ ಆಂಜನೇಯ ಸಸಿಹಿತ್ಲುವಿನ ರಾಕೇಶ್ `ಶ್ರಿ ಶಾರದಾ ಕೇಸರಿ’ ಪ್ರಶಸ್ತಿ ಪಡೆದರೆ, ಚಿತ್ರಾಪುರದ ದುರ್ಗಾಪರಮೇಶ್ವರೀಯ ರವಿ `ಶ್ರೀ ಶಾರದಾಶ್ರೀ’ ಮತ್ತು ಬಿ.ಎಚ್.ಎಲ್ ಸುರತ್ಕಲ್‍ನ ಜಸ್ಮಾನ್ ಇರ್ಶಾದ್ `ಶ್ರೀ ಶಾರದಾ ಕಿಶೋರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, `ದುರ್ಗಾಪರಮೇಶ್ವರೀ ಚಿತ್ರಾಪುರ` ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ. ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ, ಉಳ್ಳಾಲ, ಇದರ 70ನೇ ಉಳ್ಳಾಲ ದಸರಾ ಪ್ರಯುಕ್ತ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥವಾಗಿ ನಡೆದ ಪಂದ್ಯಾಟದ 74ಕೆ.ಜಿ. ವಿಭಾಗದಲ್ಲಿ ಆಂಜನೇಯ ಸಸಿಹಿತ್ಲುವಿನ ರಾಕೇಶ್ ಅವರು ದುರ್ಗಾಪರಮೇಶ್ವರೀ ಚಿತ್ರಾಪುರದ ಜಗದೀಶ್ ಮಲ್ಲ ಅವರನ್ನು ಸೋಲಿಸಿ ಶ್ರೀ ಶಾರದಾ ಕೇಸರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, 60 ಕೆ.ಜಿ ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ರವಿ ಅವರು ಅದೇ ತಂಡದ ಬಾಲರಾಜ್ ಅವರನ್ನು ಸೋಲಿಸಿ ಶಾರದಾಶ್ರೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. 36ಕೆ.ಜಿ. ವಿಭಾಗದಲ್ಲಿ ಬಿ.ಎಚ್.ಎಲ್‍ನ ಜಸ್ಮಾನ್ ಇರ್ಶಾದ್ ಅವರು ದುರ್ಗಾ ಪರಮೇಶ್ವರೀ ಚಿತ್ರಾಪುರ ಪ್ರವೀಣ್ ಹಾಲಪ್ಪ ಅವರನ್ನು ಸೋಲಿಸಿ ಶಾರದಾ ಕಿಶೋರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಪಲಿತಾಂಶ ವಿವರ : 42 ಕೆ.ಜಿ ವಿಭಾಗದಲ್ಲಿ ಡಿ.ಪಿ.ಚಿತ್ರಾಪುರದ ಪ್ರಕಾಶ್(ಪ್ರಥಮ), ಡಿ.ಪಿ. ಚಿತ್ರಾಪುರದ ವಿಠ್ಠಲ್ (ದ್ವಿತೀಯ ಸ್ಥಾನ), 47 ಕೆ.ಜಿ ವಿಭಾಗದಲ್ಲಿ ಡಿ.ಪಿ.ಚಿತ್ರಾಪುರ ಹನುಮಂತ್(ಪ್ರಥಮ) ವಿ.ಬಿ. ಬೆಂಗ್ರೆಯ ತೇಜರಾಜ್ (ದ್ವಿತೀಯ), 50ಕೆ.ಜಿ. ವಿಭಾಗದಲ್ಲಿ ಬಿ.ಎಚ್.ಎಲ್. ಸುರತ್ಕಲ್‍ನ ಇಶಾಕ್(ಪ್ರಥಮ), ಡಿ.ಪಿ.ಚಿತ್ರಾಪುರದ ಶಿವರಾಜ್(ದ್ವಿತೀಯ), 55 ಕೆ.ಜಿ.ವಿಭಾಗದಲ್ಲಿ ಡಿ.ಪಿ. ಚಿತ್ರಾಪುರದ ಅವಿನಾಶ್(ಪ್ರಥಮ), ಡಿ.ಪಿ.ಚಿತ್ರಾಪುರದ ನಾಗರಾಜ್(ದ್ವಿತೀಯ), 66ಕೆ.ಜಿ.ವಿಭಾಗದಲ್ಲಿ ಡಿ.ಪಿ.ಚಿತ್ರಾಪುರ ವೇಲುರಾಜ್(ಪ್ರಥಮ), ಡಿ.ಪಿ.ಚಿತ್ರಾಪುರದ ಪ್ರಶಾಂತ್(ದ್ವಿತೀಯ), 84ಕೆ.ಜಿ ವಿಭಾಗದಲ್ಲಿ ವಿ.ಬಿ. ಬೆಂಗ್ರೆ ಸಾಜನ್ ಕರ್ಕೇರ (ಪ್ರಥಮ), ಬಿ.ಎಚ್.ಎಲ್. ಸುರತ್ಕಲ್‍ನ ನವೀದ್ ಇರ್ಶಾದ್(ದ್ವಿತೀಯ) ಸ್ಥಾನವನ್ನು ಪಡೆದಿದ್ದಾರೆ.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ, ಮಂಗಳೂರಿನ ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷ ಮೋಹನ್ ಬೆಂಗ್ರೆ, ದ.ಕ. ಜಿಲ್ಲೆ ಬಿಜೆಪಿ ಕಾರ್ಯದರ್ಶಿ ರಣದೀಪ್ ಕಾಂಚನ್, ಅಂತರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಇರಾ, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಮಂಗಳೂರು ವಿಝನ್ ಕುಡ್ಲ ಟ್ರಸ್ಟ್ ಅಧ್ಯಕ್ಷ ಜಿತೇಂದ್ರ, ವಿಜಯ ಬ್ಯಾಂಕ್ ಆಡುಗೋಡಿ ಶಾಖೆಯ ಶಾಖಾ ವ್ಯವಸ್ಥಾಪಕ ಕೃಷ್ಣರಾಜ ಎಂ. ಪುತ್ರನ್, ರೋಹಿದಾಸ್ ಬಂಗೇರ,ರಾಜೇಶ್ ಬಂಗೇರ, ಸುನಿಲ್ ಪುತ್ರನ್, ಸುದರ್ಶನ್ ಪುತ್ರನ್, ಮಧುರಾಜ್ ಅಮಿನ್, ಕಾಶಿನಾಥ್ ಪುತ್ರನ್, ಜೀವನ್ ಪುತ್ರನ್, ಕಿಶೋರ್ ಕಾಂಚನ್, ಜಯಚಂದ್ರ ಅಮೀನ್, ಅರುಣ್ ಪುತ್ರನ್ ಭಾಗವಹಿಸಿದ್ದರು. ಪಂದ್ಯಾಟದ ತೀರ್ಪುಗಾರರಾಗಿ ರಾಜ್ಯಮಟ್ಟದ ತೀಪುರ್ಗಾರರಾದ ಸಂದೀಪ್ ಎಸ್.ರಾವ್, ಬೋಳಾರ, ಸತೀಶ್ ಬಂಗೇರ ಬೆಂಗ್ರೆ ಭಾಗವಹಿಸಿದ್ದರು.
ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಎಸ್. ಬಂಗೇರ ಸ್ವಾಗತಿಸಿದರು. ವೀರ ಮಾರುತಿ ವ್ಯಾಯಾಮ ಶಾಲೆಯ ಮಾಜಿ ಕಾರ್ಯದರ್ಶಿ ಕಪಿಲ್ ಎಸ್. ಬಂಗೇರ ವಂದಿಸಿದರು. ಮೊಗವೀರ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.