Site icon Ullalavani

ಎಸ್ಸೆಸ್ಸೆಫ್ ದ.ಕ ಜಿಲ್ಲಾ 4ಜಿ ಕ್ಯಾಂಪ್ ಗೆ ಯಶಸ್ವಿ ಮುಕ್ತಾಯ

UN NETWORKS

ಉಜಿರೆ: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ” ಉನ್ನತ ಗುರಿಗಾಗಿ ಉತ್ತಮ ಮಾರ್ಗದರ್ಶನ” ಎಂಬ ಘೋಷ ವಾಕ್ಯದಲ್ಲಿ ಯುನಿಟ್ ಮಟ್ಟದಲ್ಲಿ ಸಕ್ರೀಯ ಕಾರ್ಯಕರ್ತರನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಡೆದ 4ಜಿ ಕ್ಯಾಂಪ್ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನರವರ ಅಧ್ಯಕ್ಷತೆಯಲ್ಲಿ ಉಜಿರೆ ಮಲ್ಜ ಅ ವಿದ್ಯಾ ಸಂಸ್ಥೆಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಅಕ್ಟೋಬರ್ 1 ಆದಿತ್ಯವಾರ ಮಧ್ಯಾಹ್ನ ಗಂಟೆಗೆ ಮಲ್ಜ ಅ ವಿದ್ಯಾ ಸಂಸ್ಥೆಯ ಶಿಲ್ಪಿ ಸಯ್ಯದ್ ಜಲಾಲುದ್ದೀನ್ ತಂಙಳ್ ರವರ ದುಆ:ದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ರವರ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ವಿವಿಧ ಅವಧಿಗಳಲ್ಲಿ ನಡೆದ ತರಗತಿಯಲ್ಲಿ ಉಮರ್ ಸಖಾಫಿ ಎಡಪ್ಪಾಲ,ಎಸ್ ಪಿ ಹಂಝ ಸಖಾಫಿ ಬಂಟ್ವಾಳ,ಅಬ್ದುಸ್ಸಲಾಂ ಮುಸ್ಲಿಯಾರ್ ದೇವರಶೋಲ,ರಫೀಕ್ ಸ ಅದಿ ಬಾಕಿಮಾರ್ ಉಸ್ತಾದರುಗಳಿಂದ ಸಾಂಘಿಕ ತರಗತಿಗಳು,ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಸಯ್ಯದ್ ಸಿ.ಟಿ.ಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ರವರಿಂದ ಬ್ರೈನ್ ಜಿಮ್ಎಂಬ ಪ್ರಾಯೋಗಿಕ ತರಗತಿಯು,ಹೆಲ್ತ್ ಜಿಮ್,ಯೊಜನೆ ಮಂಡನೆ ಕಾರ್ಯಕ್ರಮಗಳು ನಡೆಯಿತು.ಸಮಾರೋಪ ಸಮಾರಮಂಭವು ಅಕ್ಟೋಬರ್ 2 ಸೋಮವಾರ ಸಂಜೆ 3:00 ಗಂಟೆಗೆ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಲ್ಜ ಅ ವಿದ್ಯಾ ಸಂಸ್ಥೆಯ ಸಾರಥಿ ಸಯ್ಯದ್ ಜಲಾಲುದ್ದೀನ್ ತಂಙಳ್ ದುಆ: ನೆರವೇರಿಸಿದರು.ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಶೈಖುನಾ ಖಾಝಿ ಬೇಕಲ್ ಉಸ್ತಾದ್ ಊದ್ಘಾಟಿಸಿದರು.ಮಾಜಿ ಎಸ್ಸೆಸ್ಸೆಫ್ ನಾಯಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ,ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ, ಹಾಫಿಲ್ ಯಾಕೂಬ್ ಸ ಅದಿ ನಾವೂರು,ಅಬ್ದುಲ್ ರಹಿಮಾನ್ ಹಾಜಿ ಪ್ರಿಂಟೆಕ್,ಆಸಿಫ್ ಹಾಜಿ ಕೃಷ್ಣಾಪುರ,ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು,ಕೆ.ಸಿ.ಎಫ್ ನಾಯಕ ಸಲೀಂ ಕನ್ಯಾಡಿ ಉಪಸ್ಥಿತರಿದ್ದರು.

ಕ್ಯಾಂಪ್ ಅಮೀರ್ ಶರೀಪ್ ಸ ಅದಿ ಕಿಲ್ಲೂರು ಸ್ವಾಗತಿಸಿದರು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ವಂದಿಸಿದರು.

Exit mobile version