UN NETWORKS
ಮಂಗಳೂರು: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಕ್ಟೋಬರ್ 1 ಇದರ ಅಂಗವಾಗಿ ಶ್ರೀ ಭಾರತಿ ಕಾಲೇಜು ನಂತೂರು ಇಲ್ಲಿ ರಕ್ತದಾನ ಶಿಬಿರ 1/10/2017ನೇ ಭಾನುವಾರದಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು, ಹವ್ಯಕ ಸಭಾ ಮಂಗಳೂರು ಇದರ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಈ ರಕ್ತದಾನ ಶಿಬಿರ ನಡೆಯಿತು.
ಚೂಂತಾರು ಪ್ರತಿಷ್ಠಾನ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಇವರು ದೀಪ ಬೆಳಗಿಸುದರ ಮುಖಾಂತರ ಶಿಬಿರವನ್ನು ಉದ್ಘಾಟಿಸಿದರು. ರಕ್ತದಾನಕ್ಕಿಂತ ಮಿಗಿಲಾದ ದಾನ ಇನ್ನೊಂದು ಇಲ್ಲ. ರಕ್ತದಾನ ಹೃದಯಗಳನ್ನು ಬೆಸೆಯುತ್ತದೆ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಸಂಕೇತ ರಕ್ತದಾನದಿಂದ ರವಾನೆಯಾಗುತ್ತದೆ ಎಂದು ಅಭಿಪ್ರಾಯಿಸಿದ್ದರು. ಮಂಗಳೂರು ಹವ್ಯಕ ಸಭಾವ ಅಧ್ಯಕ್ಷರಾದ ಶ್ರೀ ಕೃಷ್ಣ ನೀರಮೂಲೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹವ್ಯಕ ಸಭಾದ ನಿಕಟ ಪೂರ್ವ ಅದ್ಯಕ್ಷ ಮೆದು ತಿರುಮಲೇಶ್ವರ ಭಟ್ ಅವರು ಉಪಸ್ಥಿತರಿದ್ದರು.
ಪೋಲಿಸ್ ಇಲಾಖೆಯ ಬಾಲಕೃಷ್ಣ ಭಟ್ ಕೊಂಚಾಡಿ ಇವರು ಮೊದಲಾಗಿ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 20 ಮಂದಿ ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ಭಾಸ್ಕರ ಹೊಸಮನೆ ಇವರು ವಂದಾನಾರ್ಪಣೆಗೈದರು. ಹವ್ಯಕ ಸಭಾದ ಮಹಾಬಲೇಶ್ವರ ಬಾಲಸುಬ್ರಮಣ್ಯ ಕಬೆಕೋಡು ಮತ್ತು ಗಿರಿಜಾ ಎಮ್.ಜೆ ಮುಂತಾದವರು ಉಪಸ್ಥಿತರಿದ್ದರು.