Site icon Ullalavani

ಕೆ.ಸಿ.ರೋಡು: ಕದ್ದ ಎಟಿಎಂನಿಂದ ಹಣ ಡ್ರಾ ಮಾಡಿದ ಕಳ್ಳರು

UN NETWORKS

ಉಳ್ಳಾಲ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ನಗರದಲ್ಲಿ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತಲಪಾಡಿ ಕೆ.ಸಿ.ನಗರದ ಜುಬೈನ್ ಕ್ವಾಟೇಜ್ ನ ಟಿ.ಉಸ್ಮಾನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ವಿದೇಶದಲ್ಲಿರುವ ಉಸ್ಮಾನ್ ಅವರ ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಕಳವು ನಡೆದಿದೆ. ಮುಂಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳಲು ಕಪಾಟಿನಲ್ಲಿದ್ದ ಸೊತ್ತುಗಳನ್ನು ಕಳವು ನಡೆಸಿದ್ದಾರೆ.

ಎಟಿಎಂನಲ್ಲಿ ಹಣ ಡ್ರಾ ಮಾಡಿದರು ! : ಕಳ್ಳರು ಮನೆಯಲ್ಲಿದ್ದ ಲ್ಯಾಪ್ ಟಾಪ್, ಐಫೋನ್, ರೂ. 600 ನಗದು ಮತ್ತು ಎಟಿಎಂ ನ್ನು ಕಳವು ನಡೆಸಿದ್ದಾರೆ. ಕಳವು ನಡೆಸಿದ ಎರಡು ದಿನಗಳ ನಂತರ ಭಾನುವಾರ ಎಟಿಎಂ ನಿಂದ ರೂ. 30,000 ಹಣ ಡ್ರಾ ಮಾಡಿರುವ ಸಂದೇಶ ವಿದೇಶದಲ್ಲಿರುವ ಉಸ್ಮಾನ್ ಅವರಿಗೆ ಹೋಗಿತ್ತು. ಈ ಕೂಡಲೇ ಅವರು ಪತ್ನಿಯನ್ನು ಪ್ರಶ್ನಿಸಿದಾಗ ಅವರು ತಾಯಿ ಮನೆಗೆ ತೆರಳಿರುವುದಾಗಿ ತಿಳಿಸಿದ್ದು, ಬಳಿಕ ಮನೆಗೆ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂ ಕವರಿನಲ್ಲೇ ಪಿನ್ ಕೋಡನ್ನು ಇಟ್ಟಿದ್ದರಿಂದಾಗಿ ಕಳ್ಳರು ಸುಲಭವಾಗಿ ಹಣವನ್ನು ಡ್ರಾ ನಡೆಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version