UN NETWORKS
ಉಳ್ಳಾಲ: ನಗರಸಭೆ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡಿದೆ ಎಂದು ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ.ವಿ.ಆಳ್ವ ಹೇಳಿದ್ದಾರೆ.
ಅವರು ಗಾಂಧಿ ಜಯಂತಿ ಪ್ರಯುಕ್ತ ಉಳ್ಳಾಲ ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್ ಅಭಿಯಾನದಡಿ ನಗರಸಭೆಯ 27 ವಾರ್ಡುಗಳಲ್ಲಿ ಹಮ್ಮಿಕೊಂಡ “ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ” “ನಮ್ಮ ಉಳ್ಳಾಲ ಸ್ವಚ್ಛ ಸುಂದರ ಉಳ್ಳಾಲ ಇರಲಿ ನಿಮ್ಮ ಸಹಕಾರ” ಎಂಬ ಸ್ವಚ್ಛತೆ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಚಿವರ ಸಂಪೂರ್ಣ ಸಹಕಾರದೊಂದಿಗೆ ಸ್ವಚ್ಛತ ಅಭಿಯಾನ ಕಾರ್ಯಕ್ರಮ ಉಳ್ಳಾಲದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವ ಮೂಲಕ ಸ್ಥಳದ ಉತ್ತಮ ವಾತಾವರಣವನ್ನು ಕಾಪಾಡಬೇಕಿದೆ. ಇದರಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯ ಬೇಕಿದೆ ಎಂದರು.
ನಗರಸಭೆಯ ಅಧ್ಯಕ್ಷರಾದ ಹುಸೈನ್ ಕುಂಞ ಮೋನು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸ್ವಚ್ಚತಾ ಪ್ರತಿಜ್ಞೆಯನ್ನು ಬೋಧಿಸಿದರು.
ನಗರಸಭೆ ಉಪಾಧ್ಯಕ್ಷೆ ಚಿತ್ರಾ, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಹಾಗೂ ಸದಸ್ಯರಾದ ಅಶ್ರಫ್ ಬಾವಾ, ಮೀನಾಕ್ಷಿ ಬಂಗೇರ, ಇಸ್ಮಾಯಿಲ್ ಪೊಡಿಮೋನು, ಸುಂದರ್ ಉಳಿಯ, ಫಾರೂಕ್ ಉಳ್ಳಾಲ್, ಅಬ್ದುಲ್ ಫತಾಕ್, ಝರೀನಾ ಬಾನು, ಸೂರ್ಯಕಲಾ ಸುರೇಶ್, ಮೊಹಮ್ಮದ್ ಮುಕ್ಕಚೇರಿ, ಇಬ್ರಾಹಿಂ ಶೌಕತ್, ದಿನೇಶ್ ರೈ, ಮಹಾಲಕ್ಷ್ಮೀ, ಎಂ ಮುಸ್ತಾಫ ಉಳ್ಳಾಲ್,ಶಶಿಕಲಾ ಶೆಟ್ಟಿ, ಕೆ.ಸುಕುಮಾರ್, ಶಿ ಗಿರಿಜ.ಎಂ, ರಝೀಯ ಇಬ್ರಾಹಿಂ, ಫಾರೂಕ್ ಯು.ಹೆಚ್, ಸರಿತಾ ಜೀವನ್ , ಬಾಝಿಲ್ ಡಿಸೋಜಾ, ಕುಮಾರಿ ಭಾರತಿ.ಎಂ, ಜೇನ್ ಶಾಂತಿ ಡಿಸೋಜಾ, ನಾಮ ನಿರ್ದೇಶಿತ ಸದಸ್ಯರಾದ ವಾರಿಜ ಬಿ.ಎಸ್, ರಿಚರ್ಡ್ ವೇಗಸ್, ರವಿ.ಎಸ್. ಕಿಶೋರ್ ಕುಮಾರ್, ಯು.ಹೆಚ್.ಹಮ್ಮಬ್ಬ ಹಾಗೂ ಕಾವೇರಿ ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಡಾ|| ಪ್ರಿಯದರ್ಶಿನಿ ಮತ್ತು ಸದಸ್ಯರು ಹಾಜರಿದ್ದರು.
ಸದಸ್ಯರಾದ ಯು.ಎ.ಇಸ್ಮಾಯಿಲ್‍ರವರು ನಿರೂಪಿಸಿದರು. ಆರೋಗ್ಯ ನಿರೀಕ್ಷಕರಾದ ಶ್ರೀ ರಾಜೇಶ್.ಕೆ.ರವರು ವಂದಿಸಿದರು.
ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಜರಗಿದ ಜಾಥಾ ಸಮಾಪನ ವೇಳೆ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಷನಿ ನಿಲಯ ಇದರ ವಿದ್ಯಾರ್ಥಿಗಳಿಂದ ಸ್ವಚ್ಛತೆ ಕುರಿತ ಜಾಗೃತಿಯ ಬೀದಿ ನಾಟಕ ನಡೆಯಿತು.