Site icon Ullalavani

ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮಹಾಸಭೆ ಮತ್ತು ಗುರು ಜಯಂತಿ ಆಚರಣೆ

UN NETWORKS

ತೊಕ್ಕೊಟ್ಟು: ತೊಕ್ಕೊಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವಾರ್ಷಿಕ ಮಹಾಸಭೆಯು ಮತ್ತು ಗುರುಜಯಂತಿ ಆಚರಣೆ ಭಾನುವಾರದಂದು ತೊಕ್ಕೊಟಿನ ವೇದಿಕೆ ಕಛೇರಿಯಲ್ಲಿ ಕೆ.ಟಿ.ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಡೂರು ಸಾಯಿ ಮಂದಿರದ ಆಡಳಿತ ಮೋಕ್ತೆಸರರಾದ ಕೆ.ಪಿ.ಸುರೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆ ಮಾಜಿ ಅಧ್ಯಕ್ಷ ರಾದ ಆನಂದ್ ಕೆ.ಅಸೈಗೋಳಿ ಗುರು ಸಂದೇಶ ನೀಡಿದರು.

ಬಳಿಕ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಈ ಸಂಧರ್ಬದಲ್ಲಿ ಪಡುಮಲೆ ದೇಯಿ ಬೈದೆದಿ ಪ್ರತಿಮೆ ಅವಮಾನಿಸಿದ ದುರುಳರ ಕೃತ್ಯವನ್ನು ಖಂಡಿಸಿ, ಇತರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಲಾಯಿತು.ವೇದಿಕೆಯ ಪ್ರಮುಖರಾದ ಸತೀಶ್ ಕರ್ಕೇರ,ಜೀವನ್ ಕುಮಾರ್, ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು, ಲಕ್ಷ್ಮಣ ಪೂಜಾರಿ,ಹರೀಶ್ ಮುಂಡೋಳಿ , ರಾಜೇಶ್ ಕೆರೆಬೈಲ್, ಉಪಸ್ಥಿತರಿದ್ದರು.

Exit mobile version