UN NETWORKS
ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡೆರೇಶನ್ ಎಸ್ ಎಸ್ ಎಫ್ ಸಪ್ಟೆಂಬರ್ 19 ಧ್ವಜ ದಿನದ ಪ್ರಯುಕ್ತ ತೊಕ್ಕೊಟ್ಟು ಹಿದಾಯತ್ ನಗರ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಹಿದಾಯತ್ ನಗರ ಮೈದಾನದಲ್ಲಿ ನಡೆಯಿತು.
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲದ ಅಧ್ಯಕ್ಷ ಹಸನ್ ಮುಬಾರಕ್ ಸಖಾಫಿ ಧ್ವಜಾರೋಹಣ ನೆರೆವೇರಿಸಿ ಎಸ್ ಎಸ್ ಎಫ್ ನ ಮಹತ್ವವನ್ನು ವಿವರಿಸಿದರು.
ಉಳ್ಳಾಲ್ ನಗರ ಸಭೆಯ ಸದಸ್ಯ ಸ್ತಳೀಯ ಕೌನ್ಸಿಲರ್ ಫಾರುಕ್ ಯು.ಎಚ್ ಮಾತನಾಡಿ ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ಬಾಂದವ್ಯ ಬೆಳೆಸಿ ಕಾರ್ಯಚರಿಸಲು ಉಪದೇಶ ನೀಡಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಸಯ್ಯದ್ ಮದನಿ ದರ್ಗ ಉಳ್ಳಾಲ ಸದಸ್ಯರಾದ ಮುಹಮ್ಮದ್ , ತೊಕ್ಕೋಟ್ಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಸೆಕ್ಟರ್ ರಿಲೀಫ್ ಸರ್ವಿಸ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಎಸ್ ವೈ ಎಸ್ ಸದಸ್ಯರಾದ ಅಮೀರ್ ತೊಕ್ಕೊಟ್ಟು ಉಪಸ್ಥಿತರಿದ್ದರು.