Site icon Ullalavani

ತು.ರ.ವೇ ಕಚೇರಿ ಬ್ಯಾನರ್ ಗೆ ಹಾನಿ

UN NETWORKS

ತೊಕ್ಕೊಟ್ಟು: ತುಳುನಾಡು ರಕ್ಷಣಾ ವೇದಿಕೆ ಕಚೇರಿಯ ಬಳಿ ಹಾಕಲಾದ ಬ್ಯಾನರ್‍ಗಳನ್ನು ಕಿಡಿಗೇಡಿಗಳು ಹರಿದು, ಶಟರನ್ನು ತೆರೆಯಲು ಯತ್ನಿಸಿರುವ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದೆ.

ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಕಚೇರಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿ ಕಚೇರಿಯ ಹೊರ ಆವರಣದ ಗೋಡೆಯಲ್ಲಿ ಎರಡು ಬೃಹತ್ ಗಾತ್ರದ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಒಂದು ಬ್ಯಾನರನ್ನು ಸಂಪೂರ್ಣ ಹರಿದು ಕೊಂಡೊಯ್ದಿರುವ ಕಿಡಿಗೇಡಿಗಳು ಇನ್ನೊಂದು ಬ್ಯಾನರಿಗೆ ಭಾಗಶ: ಹಾನಿ ಮಾಡಿದ್ದಾರೆ.

ಹೋರಾಟ ಹತ್ತಿಕ್ಕುವ ಪ್ರಯತ್ನ : ತುಳುನಾಡು ರಕ್ಷಣಾ ವೇದಿಕೆ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ , ದುರ್ಬಲರ ಪರವಾಗಿ ದನಿ ಎತ್ತಿರುವುದಲ್ಲದೆ ಉಳ್ಳಾಲ ವ್ಯಾಪ್ತಿಯಲ್ಲಿ ಅವ್ಯಾಹತವಾಗಿರುವ ಗಾಂಜಾ ವಿರುದ್ಧ ಹೋರಾಟ ನಡೆಸಿತ್ತು. ಇಂತಹ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕಿಡಿಗೇಡಿಗಳು ದುಷ್ಕøತ್ಯ ಎಸಗಿದ್ದಾರೆ ಎಂಬುದು ತು.ರ.ವೇ ಮುಖಂಡ ಸಿರಾಜ್ ಅಡ್ಕರೆ ಆರೋಪಿಸಿದ್ದಾರೆ.

Exit mobile version