Site icon Ullalavani

ಕೋಟೆಕಾರು: ಶಾರದಶರನ್ನವರಾತ್ರಿ ಆಮಂತ್ರಣ ಪತ್ರ ಬಿಡುಗಡೆ

UN NETWORKS

ಕೋಟೆಕಾರು: ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಣಾಮ್ನಾಯ ಶ್ರೀ ಶಾರದಾ ಪೀಠ ಕೋಟೆಕಾರು ಶಾಖಾ ಮಠದಲ್ಲಿ ಸೆ. 21ರಿಂದ 30ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಶುಕ್ರವಾರ ಶಾಖಾ ಮಠದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸೆ. 21ರಂದು ಸಂಜೆ ಗಂಟೆ 5.00ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಹರಿಕಥೆ, ಹರಿದಾಸರ ಶ್ರೀ ದೇವಕೀ ತನಯ ಕೋಡುಲ, ಪಾಶುಪಥ ಪ್ರದಾನ ಕಥಾಭಾಗ ನಡೆಯಲಿದೆ.

ಸೆ. 22ರಂದು ಸಂಜೆ 5.30ಕ್ಕೆ ವಾಲಿಮೋಕ್ಷ ಯಕ್ಷಗಾನ ತಾಳಮದ್ದಲೆ, 23ರಂದು ಸಾಂಸ್ಕøತಿಕ ಕಾರ್ಯಕ್ರಮ, 24ರಿಂದ29ರವರೆಗೆ ಸಂಜೆ ಗಂಟೆ 5.30ಕ್ಕೆ ಕರ್ನಾಟ ಸಂಗೀತ ಕಛೇರಿ ಸೆ. 30ರಂದು ಹರಿಕಥೆ ಹಾಗೂ ಶ್ರೀ ದೇವಿ ಮಹಾತ್ಮೆ ಕಥಾಭಾಗ ನಡೆಯಲಿದೆ.

ಕಾರ್ಯಕ್ರಮದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶಾಖಾ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ, ಉತ್ಸವ ಸಮಿತಿಯ ಸಂಚಾಲಕ ಚಂದ್ರಹಾಸ ಅಡ್ಯಂತಾಯ ಕುತ್ತಾರುಗುತ್ತು, ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಸಂಘಟನಾ ಕಾರ್ಯದರ್ಶಿ ಬೊಳ್ಳಾವ ವಿದ್ಯಾಶಂಕರ, ಕೋಶಾಧಿಕಾರಿ ಡಾ| ಮಾಧವಿ ವಿಜಯಕುಮಾರ್, ಮಹಿಳಾ ಸಮಿತಿ ಅಧ್ಯಕ್ಷೆ ಸುಷ್ಮಾ ಜನಾರ್ದನ್ ಹಾಗೂ ಪ್ರಧಾನ ಕಾರ್ಯದರ್ಶಿ ಜಯಶ್ರೀ ಪ್ರಫುಲ್ಲದಾಸ್ ಉಪಸ್ಥಿತರಿದ್ದರು.

Exit mobile version