UN NETWORKS
ಮುಂಬಯಿ: ತುಳುಕನ್ನಡಿಗರ ಅಂತರಾಷ್ಟ್ರೀಯ ಪ್ರಸಿದ್ಧ ವೃತ್ತಿಪರ ಶಿಕ್ಷಣ ಸಂಸ್ಥೆ ಎಂದೆಣಿಸಿದ ಇಂಡಿಯಾ ಇಂಟರ್‍ನೇಶನ ಲ್ ಟ್ರೇಡ್ ಸೆಂಟರ್ (ಐಐಟಿಸಿ) ಸಂಸ್ಥಾಪಕ ಎಸ್.ಕೆ ಉರ್ವಾಲ್ ಅವರು ಐಐಟಿಸಿ ಮೂಲಕ ರಾಷ್ಟ್ರ್ರದ ಸಾವಿರಾರು ಮಕ್ಕಳು ಸ್ವದ್ಯಮಿಗಳಾಗಿ ಬದುಕು ರೂಪಿಸುವಲ್ಲಿ ಯಶಸ್ವಿ ಆಗಿದ್ದಾರೆ. ದೃಢವಿಶ್ವಾಸ, ಅಭಿಲಾಷೆ, ಶ್ರಮಜೀವನದಿಂದಲೇ ಸಫಲತಾ ಬದುಕು ರೂಪಿಸಲು ಸಾಧ್ಯವಾಗಿದ್ದು ಇವೆಲ್ಲಕ್ಕೂ ಆತ್ಮವಿಶ್ವಾಸ ಮುಖ್ಯವಾದದ್ದು. ಫ್ಯಾಶನ್‍ರಂಗ ಬರೇ ಜೀವನ ನಿರ್ಹಹಣೆ ಮಾತ್ರವಲ್ಲ ಬದುಕಿಗೆ ಪ್ರತಿಷ್ಠೆಯನ್ನೂ ತಂದೊದಗಿಸುವ ಕ್ಷೇತ್ರವಾಗಿದೆ. ಈ ಮೂಲಕ ವಿಶೇಷವಾಗಿ ಮಹಿಳೆಯರು ಸ್ವದ್ಯಮಿಗಳಾಗುವ ವಿಫುಲ ಅವಕಾಶಗಳಿವೆ ಎಂದು ಬಾಲಿವುಡ್‍ನ ಹೆಸರಾಂತ ವಿನ್ಯಾಸಗಾರ ಆ್ಯಶ್ಲೀ ರೆಬೆಲ್ಲೋ ತಿಳಿಸಿದರು.
ಅಂಧೇರಿ ಪೂರ್ವದ ಹೊಟೇಲ್ ಲೀಲಾ ಕೆಂಪೆನ್‍ಸ್ಕಿ ಬಾಲ್‍ರೂಮ್ ಸಭಾಗೃಹದಲ್ಲಿ ತುಳುಕನ್ನಡಿಗರ ಅಂತರಾಷ್ಟ್ರೀಯ ಪ್ರಸಿದ್ಧ ವೃತ್ತಿಪರ ಶಿಕ್ಷಣ ಸಂಸ್ಥೆ ಎಂದೆಣಿಸಿದ ಐಐಟಿಸಿ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ `ಫ್ಯಾಶನ್ ರಂಗದ ಭವಿಷ್ಯ’ ಕುರಿತಾದ ಕಾರ್ಯಗಾರ ನಡೆಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆ್ಯಶ್ಲೀ ರೆಬೆಲ್ಲೋ ಮಾತನಾಡಿದರು.
ನಿವೃತ್ತಿಯಿಲ್ಲದ ಉದ್ಯೋಗಕ್ಕೆ ಫ್ಯಾಶನ್‍ರಂಗ ಸಹಕಾರಿ. ಫ್ಯಾಶನ್‍ರಂಗ ಸ್ವಬದುಕು ರೂಪಿಸುವ ಶಕ್ತಿಯಾಗಿದೆ. ಫ್ಯಾಶನ್ ಕ್ಷೇತ್ರದಿಂದ ನಿರ್ಭಯತೆಯ ಭವ್ಯ ಬದುಕು ನಿರ್ಮಾಣ ಸಾಧ್ಯ. ಐಐಟಿಸಿ ದೆಹಲಿ, ಮಹಾರಾಷ್ಟ್ರದಾ ದ್ಯಂತ ಸೇವಾ ನಿರತವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯ ಕಲ್ಪಿಸಿ ಧನ್ಯತೆ ಪಡೆದಿದೆ. ಒಂದೇ ಸಲಕ್ಕೆ ಹಲವು ವಿಷಯಗಳಲ್ಲಿ ವೃತ್ತಿಪರ ಶಿಕ್ಷಣ ನೀಡಿ ಬಹುಪ್ರಕಾರದ ತರಬೇತಿಯನ್ನೀಡುವ ಭಾರತ ರಾಷ್ಟ್ರದ ಏಕೈಕ ಸಂಸ್ಥೆ ಇದಾಗಿದೆ. ಇಲ್ಲಿ ಅಭ್ಯಾಸಿಸಿ ಉದ್ಯೋಗ ಪಡೆದು ಬದುಕು ರೂಪಿಸಿದವರೇ ಸಾವಿರಾರು ಮಂದಿಗಳಿದ್ದಾರೆ ಎಂದು ಬಾಲಿವುಡ್ ನಟ, ಪ್ರಸಿದ್ಧ ಯುವ ಲೇಖಕ ಉಮೇಶ್ ಫೆರ್ವಾನಿ ತಿಳಿಸಿದರು.
ಬಾಲಿವುಡ್ ರಂಗದ ಹೆಸರಾಂತ ವಿನ್ಯಾಸಗಾರ್ತಿ ಭಾರತ ರಾಷ್ಟ್ರದ ಪ್ರಥಮ ಮಿಸ್ ಇಂಡಿಯಾ ಪುರಸ್ಕೃತೆ ಮೆಹೆರ್ ಕಾಸ್ತೆಲಿನೋ ಮತ್ತು ಬಾಲಿವುಡ್‍ನ ಮೇಕ್-ಅಪ್ ಕಲೋಪಾಸಕ (ಬನಾವಣಾ ಕಲಾವಿದ) ಒಜಾಸ್ ರಜನಿ ಅವರೂ ಪಾಲ್ಗೊಂಡು ಕಾರ್ಯಗಾರ ನಡೆಸಿ ಆಧುನಿಕ ಯುಗದಲ್ಲಿ ಫ್ಯಾಶನ್ ರಂಗದ ಪಾತ್ರ, ಮಹತ್ವ ಮತ್ತು ವೃತ್ತಿಯಾಗಿಸಿ ಮುನ್ನಡೆದರೆ ಫಲಾನುಭವಿಗಳ ಭವಿಷ್ಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನಿತ್ತರು.
ಮ್ಯಾನೇಜ್‍ಮೆಂಟ್ ಗುರು ಸೈರಸ್ ಗೊಂದಾ ಮತ್ತು ಉಮೇಶ್ ಫೆರ್ವಾನಿ ತಮ್ಮ ಅತಿಥೇಯಲ್ಲಿ ಆಯೋಜಿಸಿ ದ್ದ ಕಾರ್ಯಕ್ರಮದಲ್ಲಿ ನಟಿ ಪೂಜಾ ಶುಕ್ಲಾ, ಸೆಲೆಬ್ರೆಟಿ ಮೇನೆಜರ್ ಬಾದ್‍ಷಾ ಖಾನ್, ಜಾಸ್ಮೀನ್ ಖಾನ್, ಸಂಸ್ಥೆಯ ನಿಖಿಲ್ ಸಂಪತ್, ಶಂಕರ್ ಪಾಂಡೇ, ಸಮಾಜ ಸೇವಕರಾದ ರವಿ ಸುವರ್ಣ ಘಾಟ್ಕೋಪರ್, ಮುರಳೀಧರ್ ಭಟ್ ಡೊಬಿವಿಲಿ ಮುಂತಾದವರು ಉಪಸ್ಥಿತರಿದ್ದರು. ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ಉಮೇಶ್ ಫರ್ವಾನಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ರೀನಾ ವಿ.ಉರ್ವಾಳ್ ಧನ್ಯವದಿಸಿದರು.
ಐಐಟಿಸಿ ಇದರ ವಿವಿಧ ಶಾಖೆಗಳ ವಿದ್ಯಾಥಿರ್ಥಿಗಳು ರ್ಯಾಂಪ್‍ವಾಕ್ ನಡಿಗೆಯಲ್ಲಿ ಹಾಗೂ ಕಾರ್ಯಗಾರದಲ್ಲೇ ಕ್ಷಣಾರ್ಧದಲ್ಲಿ ವೈವಿಧ್ಯಮಯವಾಗಿ ರೂಪಿಸಿದ ವಸ್ತ್ರಾಭರಣಗಳ ಮೂಲಕ ತಮ್ಮ ಫ್ಯಾಶನ್ ಪ್ರತಿಭೆಯನ್ನು ಪ್ರದರ್ಶಿಸಿದರು. ವೃತ್ತಿಪರ ಶಿಕ್ಷಣ ರಂಗದಲ್ಲಿ ಸುಮಾರು ಐದು ದಶಕದ ಅನುಭವವಿದ್ದು, 51 ವರ್ಷಗಳ ಸುದೀರ್ಘವಧಿಯಲ್ಲಿ ಸಾವಿರಾರು ವಿದ್ಯಾಥಿರ್ಥಿಗಳಿಗೆ ಭವಿಷ್ಯ ರೂಪಿಸುವಲ್ಲಿ ಯಶಕಂಡ ಈ ಐಐಟಿಸಿ ಸಂಸ್ಥೆಯು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತುಳು ಕನ್ನಡಿಗ ಎಸ್.ಕೆ ಉರ್ವಾಳ್ ವೃತ್ತಿಪರ ಸಂಸ್ಥೆಯಾಗಿ ಸ್ಥಾಪಿತ ಗೊಂಡಿತ್ತು. ಸದ್ಯ ಈ ಸಂಸ್ಥೆ ಜಾಗತಿಕವಾಗಿ ಹೆಸರಾಂತ ಫ್ಯಾಶನ್ ಡಿಸೈನಿಂಗ್ ಸಂಸ್ಥೆಯಾಗಿ ರೂಪಿಸಲ್ಪಟ್ಟಿದೆ.