Site icon Ullalavani

ಕಾರಾಜೆ ಶಾಖೆ ಎಸ್.ವೈ.ಎಸ್. ಮಹಾಸಭೆ: ನೂತನ ಸಮಿತಿ ಅಸ್ತಿತ್ವಕ್ಕೆ

UN NETWORKS

ಬಂಟ್ವಾಳ: ಸುನ್ನೀ ಯುವಜನ ಸಂಘ (ಎಸ್. ವೈ. ಎಸ್) ಕಾರಾಜೆ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಾರಾಜೆ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ಅಬ್ದುಲ್ ಜಲೀಲ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಬೊಳ್ಳಾಯಿ ಯೂಸುಫ್ ಮದನಿಯವರು ಉದ್ಛಾಟಿಸಿದರು.

ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿಯವರು ಮಂಡಿಸಿದ ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ-ವ್ಯಯ ಲೆಕ್ಕಪತ್ರವನ್ನು ಸಭೆಯು ಸರ್ವಾನುಮತಗಳಿಂದ ಅಂಗೀಕರಿಸಿದ ನಂತರ ಚುನಾವಣಾ ವೀಕ್ಷಕರಾದ ಕೊಳಕೆ ಅಬ್ದುಲ್ಲ ಹಾಗೂ ಮುಹಮ್ಮದ್ ರವರ ನಾಯಕತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ : ಅಬ್ದುಲ್ ಜಲೀಲ್ , ಪ್ರಧಾನ ಕಾರ್ಯದರ್ಶಿ : ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಕೋಶಾಧಿಕಾರಿ : ಕೆ. ಇಬ್ರಾಹೀಂ (ಮೋನಾಕ),ಉಪಾಧ್ಯಕ್ಷರುಗಳು : ಮುಹಮ್ಮದ್ ರಫೀಖ್ , ರಫೀಖ್, ಕಾರ್ಯದರ್ಶಿಗಳು : ಮುಹಮ್ಮದ್ ಫಾರೂಖ್, ಮುಹಮ್ಮದ್ ಹನೀಫ್, ಸದಸ್ಯರುಗಳು : ಲತೀಫ್ ಹಾಜಿ , ಇಬ್ರಾಹೀಂ ಮೇಸ್ತ್ರಿ, ಮುಹಮ್ಮದ್ ಅನ್ಸಾರ್, ಅಶ್ರಫ್, ಇಬ್ರಾಹೀಂ, ಅಬ್ದುಲ್ ಹಮೀದ್, ಫಾರೂಖ್
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ವೇದಿಕೆಯಲ್ಲಿ ಮುಹಮ್ಮದ್ ಶರೀಫ್, ಮುಹಮ್ಮದ್ ನೌಫಲ್, ಅಬ್ದುಸ್ಸಲಾಂ ಮೊದಲಾದವರು ಉಪಸ್ಥಿತರಿದ್ದರು.

Exit mobile version