UN NETWORKS
ಉಳ್ಳಾಲ: ದೇರಳಕಟ್ಟೆ ಪಾನೀರು ಧರ್ಮಕೇಂದ್ರದಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಪ್ರಧಾನ ಧರ್ಮ ಗುರುಗಳು ರೆ| ಫಾ| ಪಾವುಲ್ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ಧರ್ಮ ಗುರು ರೆ| ಫಾ| ಕ್ಲೊಡ್ ಮಸ್ಕರೇನೆಸ್ ಹಾಗೂ ಪಾನೀರು ಚರ್ಚ್ ಧರ್ಮ ಗುರು ರೆ| ಫಾ| ಡೆನ್ನಿಸ್ ಸುವಾರಿಸ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ ಸರ್ವ ಸದಸ್ಯರು, ಧರ್ಮ ಭಗಿನಿಯರು ಮತ್ತು ಗುರಿಕಾರು ಸರ್ವ ಕ್ರೈಸ್ತ ಭಾಂದವರು ಹಾಜರಿದ್ದರು.