UN NETWORKS
ಉಳ್ಳಾಲ: ರೋಟರಿ ಕ್ಲಬ್ ಮಂಗಳೂರು ಇದರ ವತಿಯಿಂದ ನೀಡಲ್ಪಡುವ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಕುಂಪಲ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ್ ಇವರು ಪಡೆದಿದ್ದು ಮಂಗಳೂರಿನ ಮೋತಿಮಹಲ್ ಹೊಟೇಲ್ ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೆಂಕಟೇಶ್ ಪೈ, ಉಷಾ ಪೈ, ನೀತಾ ಕಾಮತ್, ನಿಖಿತಾ ಕಾಮತ್ ಡಾ| ನರೇಂದ್ರ ಕಾಮತ್, ರೊ| ರೋಹಿನಾಥ್, ಆಧ್ಯಕ್ಷ ರೊ| ವಸಂತ್ ಶೆಣೈ, ರೊ| ಸಂಜೀವ ಪೂಜಾರಿ, ರೊ| ವಸಂತ್ ಪೈ, ರೊ| ಡಾ| ಅರ್ಜುನ್ ನಾಯಕ್, ರೊ| ಡಾ| ಸಿದ್ದಾರ್ಥ್ ಶೆಟ್ಟಿ, ಕಾರ್ಯದರ್ಶಿ ರೊ| ಸಿ.ಎ. ನವೀನ್ ನಾರಾಯಣ, ನಾರಾಯಣ ಕುಂಪಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಟರಿ ಮಹಿಳಾ ವಿಭಾಗದಿಂದ ಕುಂಪಲ ಶಾಲಾ ಗ್ರಂಥಾಲಯಕ್ಕೆ ರೂ. 5000 ಮೌಲ್ಯದ ಪುಸ್ತಕಗಳನ್ನು ಶಿಕ್ಷಕ ವಿಶ್ವನಾಥ್ ರವರಿಗೆ ಹಸ್ತಾಂತರಿಸಿದರು.