Site icon Ullalavani

ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದಲ್ಲಿ ಮೇರಿ ಮಾತೆಯ ಜನ್ಮ ದಿನ ಹಾಗೂ ತೆನೆ ಹಬ್ಬದ ಸಂಭ್ರಮ

UN NETWORKS

ತೊಕ್ಕೊಟ್ಟು: ಮೇರಿ ಮಾತೆಯ ಜನ್ಮ ದಿನ ಹಾಗೂ ತೆನೆ ಹಬ್ಬದ ಸಂಭ್ರಮವನ್ನು ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದಲ್ಲಿ ಸಪ್ಟೆಂಬರ್ 8 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.

    Photo: Pacchu Permannur

ಆತೀ ವಂದನೀಯ ಡಾ|ಜೋಸೆಪ್ ಮಾರ್ಟಿನ್,ರೆಕ್ಟರ್ ಸಂತ ಜೋಸೆಪ್ ಸೆಮಿನರಿ ಮಂಗಳೂರು ಇವರು ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು.800 ಕ್ಕೂ ಅಧಿಕ ಮಂದಿ ಮಕ್ಕಳು ಮೇರಿ ಮಾತೆಗೆ ಭಕ್ತಿ ಪೂರ್ವಕವಾಗಿ ಹೂಗಳನ್ನು ಅರ್ಪಿಸಿದರು.

ಈ ಸಂಧರ್ಭದಲ್ಲಿ ಆತೀ ವಂದನೀಯ ಡಾ|ಜೆ.ಬಿ ಸಲ್ಡಾನ್ಹಾ.ಪ್ರದಾನ ಧರ್ಮಗುರುಗಳು,ವಂದನೀಯ ಸ್ಟ್ಯಾನಿ ಪಿಂಟೋ ಹಾಗೂ ವಂದನೀಯ ಲೈಝಿಲ್ ಡಿ’ಸೋಜ ಸಹಾಯಕ ಧರ್ಮಗುರುಗಳು,ವಂದನೀಯ ಪ್ರವೀಣ್ ಜೋಯ್ ಸಲ್ಡಾನ್ಹ ವಂದನೀಯ ಫೆಲಿಕ್ಸ್ ನೊರೊನ್ಹ ,ಉಪ ಯಾಜಕರಾದ ವಂದನೀಯ ತ್ರಿಶಾನ್ ಡಿ’ಸೋಜ ಉಪಸ್ಥಿರಿದ್ದು ಬಲಿಪೂಜೆ ಅರ್ಪಿಸಿದರು.ಸುಮಾರು 3000 ಕ್ಕೂ ಅಧಿಕ ಭಕ್ತಾಧಿಗಳು ಈ ಸಂಭ್ರಮದ ಬಲಿಪೂಜೆಯಲ್ಲಿ ಪಾಲ್ಗೊಂಡು ದೈವಿಕ ಅನುಭವವನ್ನು ಪಡೆದರು.

Exit mobile version