UN NETWORKS
ಉಳ್ಳಾಲ: ಮಹಾವಿಷ್ಣುವಿನ ವಾಮನಾವತಾರದ ಸ್ಮರಣೆಗಾಗಿ ಹಾಗೂ ಬಲಿ ಚಕ್ರವರ್ತಿಯ ಆಗಮನವನ್ನು ಪ್ರತಿನಿಧಿಸುವ ಹಬ್ಬವಾದ ‘ಓಣಂ’ಅನ್ನು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಓಣಂ ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳು ಭಾಷಣ, ಸಾಕ್ಷ್ಯಚಿತ್ರ ಮತ್ತು ತಿರುವಾದಿರ ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ವಿಷೇಶವಾದ ಪುಷ್ಪರಂಗವಲ್ಲಿ (ಪೂಕಳಂ)ನ್ನು ವಿದ್ಯಾರ್ಥಿಗಳು ರಚಿಸಿದರು.
ಈ ಕಾರ್ಯಕ್ರಮವನ್ನು ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಮಧುಪಾಲ್ ಮತ್ತು ಇಶಾ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಶಿಕ್ಷಕವರ್ಗದವರು ಉಪಸ್ಥಿತರಿದ್ದರು.