UN NETWORKS
ಮಂಗಳೂರು: ಭಾರತೀಯ ಜೀವ ವಿಮಾ ನಿಗಮ ಮಂಗಳೂರು ಪ್ರಥಮ ಶಾಖೆಯಲ್ಲಿ 61ನೇ ವರ್ಷದ ವಿಮಾ ಸಪ್ತಾಹದಂಗವಾಗಿ ಜ್ಯೂನಿಯರ್ ರಾಜ್‍ಕುಮಾರ್ ಖ್ಯಾತಿಯ ಜಗದೀಶ ಶಿವಪುರ ಇವರಿಂದ ಸ್ವರಾಂಜಲಿ ವೈವಿಧ್ಯಮಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಶಾಖೆಯ ಮುಖ್ಯಾಶಾಖಾಧಿಕಾರಿ ಹೆಚ್. ರಾಧಾಕೃಷ್ಣ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸಹಾಯಕ ಶಾಖಾಧಿಕಾರಿ ಮೋಹನ ಕುಮಾರ್ , ಕಂಕನಾಡಿ ಶಾಖಾಧಿಕಾರಿ ಸುದರ್ಶನ್ ಪೈ ,ಆಭಿವೃದ್ದಿ ಆಧಿಕಾರಿ ಆರ್.ಕೆ.ಉಪ್ಪೂರು.ಸಾಹಿತಿ ರಾಧಕೃಷ್ಣ,ರಿತೇಶ್ ಬಾಳಿಗ,ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ರಸಧಾರೆಯ ಮಧ್ಯೆ ಚಿತ್ರ ರಚನೆಯನ್ನು ರಚಿಸಿ ಮನರಂಜಿಸಿದ ಡಾ.ವರ್ಣೋದಯ , ಹಾಡುಗಾರ್ತಿ ಅಕ್ಷತಾ ಕಡೇಶಿವಾಲಯ ಮತ್ತುಜ್ಯೂನಿಯರ್ ರಾಜ್‍ಕುಮಾರ್ ಜಗದೀಶ ಶಿವಪುರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ರಾಧಾಕೃಷ್ಣ ಅವರು ನಿರೂಪಿಸಿ ,ಅರ್.ಕೆ ಉಪ್ಪೂರು ಸ್ವಾಗತಿಸಿ ,ಆಭಿವೃದ್ದಿ ಆಧಿಕಾರಿ ಧರ್ಮವತಿ ವಂದಿಸಿದರು.