Site icon Ullalavani

ಉಳ್ಳಾಲ : ದಂಪತಿ ಸಮೇತ ಮಕ್ಕಳಿಗೆ ಮಚ್ಚಿನಿಂದ ದಾಳಿ

UN NETWORKS

ಉಳ್ಳಾಲ:  15 ಮಂದಿ ರೌಡಿಗಳ  ತಂಡವೊಂದು ಕುಟುಂಬದ ಮಚ್ಚಿನಿಂದ ದಾಳಿ ನಡೆಸಿರುವ ಘಟನೆ ಉಳ್ಳಾಲ ದರ್ಗಾ ಸಮೀಪದ ಮನೆಯೊಂದರಲ್ಲಿ ನಿನ್ನೆ ತಡರಾತ್ರಿ 11.30 ರ ಸುಮಾರಿಗೆ ಸಂಭವಿಸಿದೆ

ಮನೆ ಮಾಲೀಕ ಖಾಸಿಮ್, ಆತನ ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಮಚ್ಚಿನಿಂದ ಹಲ್ಲೆಗೊಗಾದವರು.

ಖಾಸಿಮ್  ಎಂಬವರ  ಮತ್ತೋರ್ವ ಮಗ ಹಂಝ್ ನನ್ನು ಕೊಲೆ ಮಾಡಲು ಬಂದಿದ್ದಾಗಿ ಹೇಳಿದ ಹಲ್ಲೆಕೋರರು ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಯಾಳುಗನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಒಂದು ಗುಂಪಿನೊಂದಿಗೆ ದಂಪತಿ ಪುತ್ರ ಹಂಝ್ ಜಗಳವಾಡಿಕೊಂಡಿದ್ದ ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

Exit mobile version