UN NETWORKS
ಬಬ್ಬುಕಟ್ಟೆ: ವಿದ್ಯಾರ್ಥಿಗಳು ಮೊಬೈಲ್‍ಗಳಂಥಹ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳದೆ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು, ಉತ್ತಮ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪೆÇ್ರ| ಎ.ಎಮ್.ಖಾನ್ ಅಭಿಪ್ರಾಯಪಟ್ಟರು.
ಸಂಸ್ಥೆಯ ಸಂಚಾಲಕರಾದ ರಹಮ್ಮತುಲ್ಲಾಹ್ ಇವರು ವಿದ್ಯಾರ್ಥಿಗಳ ಪ್ರತಿಭೆ ಸಮಾಜದಲ್ಲಿ ಶಾಂತಿ ಕಾಪಾಡಲು, ಪರಸ್ಪರ ಬಾಂಧವ್ಯ ಬೆಸೆಯಲು ಸಹಕಾರಿಯಾಗಲಿ ಎಂದು ಹಾರೈಸಿದರು. ವಿದ್ಯಾರ್ಥಿನಿಯರಿಗಾಗಿ ಕಿರಾತ್, ಹಮ್ದ್, ಟರ್ನ್ ದಿ ಕೋಟ್, ಮೆಹಂದಿ, ಕೊಲಾಜ್, ಕವನ , ಕ್ವಿಜ್ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು.
ಶಾಂತಿ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಅಬ್ದುರ್ರಹಮಾನ್‍ನ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳ ಉತ್ತಮ ಪ್ರಯತ್ನವನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಲೈಬ್ರೆರಿ ಆಂಡ್ ಇನ್ ಫಾರ್ಮೇಶನ್ ಸಾಯನ್ಸ್ ಪೆÇ್ರ| ಕೈಸರ್ ಎಂ. ಖಾನ್, ಹಾಗೂ ಮಹಮ್ಮದ್ ಆಲಿ ನ್ಯಾಯವಾದಿ, ಮಂಗಳೂರು. ಇವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿಜೇತರನ್ನು ಸನ್ಮಾನಿಸಿದರು. ಸೈಂಟ್ ಆಗ್ನೇಸ್‍ಕಾಲೇಜು ಮಂಗಳೂರು, ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಸಮಾರಂಭದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್‍ನ ಗೌರವ ಸಲಹೆಗಾರರಾದ ಜ. ಕೆ.ಎಂ. ಶರೀಫ್, ಉಪಾಧ್ಯಕ್ಷ ಎ.ಎಚ್. ಮೊಹಮ್ಮದ್, ಕಾರ್ಯದರ್ಶಿ ಅಬ್ದುಲ್ ಕರೀಂ, ಅಬ್ದುಲ್ ಖಾದರ್, ಆಡಳಿತ ಮಂಡಳಿಯ ಸದಸ್ಯಾರಾದ ಪಿ. ಅಬ್ಬಾಸ್, ಹಸನ್ ಪಿಲಾರ್, ಮಹಮ್ಮದ್ ಸಮೀರ್, ಸಮೀನ ಅ¥sóÁ್ಸನ, ಸಾಜಿದ ಮೂಮಿನ್, ನಸೀರಾ ದೀನ್ , ಕಾಲೇಜಿನ ಪ್ರಾಂಶುಪಾಲ ಭಾರತಿ ಎಂ.ಆರ್. ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಆಯಿಶಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕಿ ವಿದ್ಯಾರ್ಥಿನಿ ಆಯಿಶಾ ಮೊಹ್ಸೀನ್ ಸ್ವಾಗತಿಸಿದರು. ವಿದ್ಯಾರ್ಥಿನಿ ¥sóÁತಿಮಾ ರೂಬಿ ನಹಾನ ಹಾಗೂ ಹುದಾ ನಿರೂಪಿಸಿದರು. ವಿದ್ಯಾರ್ಥಿನಿ ರಿಧಾ ಮತ್ತು ನಿಭಾ ಧನ್ಯವಾದವಿತ್ತರು.