UN NETWORKS
ಮಂಗಳೂರು: ಆಗಸ್ಟ್ 29- ಸಮೀಕ್ಷೆಯೊಂದರ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಹೃದ್ರೋಗಿಗಳು ಭಾರತದಲ್ಲಿ ಕಂಡುಬರಲಿದ್ದಾರೆ. ಪ್ರತಿಐದು ಸಾವಿನಲ್ಲಿ ಒಬ್ಬರು ಹೃದ್ರೋಗದಿಂದಲೇ ಸಾಯುತ್ತಿದ್ದಾರೆ. 2020ರ ವೇಳೆಗೆ ಇವರ ಸಂಖ್ಯೆ ಮೂರಕ್ಕೆ ಏರಲಿದೆ. ಭಾರತದಲ್ಲಿ ಅಂದಾಜು 4.5 ಕೋಟಿ ಕೊರೊನರಿಆರ್ಟರಿ ರೋಗಿಗಳಿದ್ದಾರೆ. ಹೆಚ್ಚು ಹೆಚ್ಚು ಯುವಜನಾಂಗವೇಇದಕ್ಕೆ ಬಲಿಯಾಗುತ್ತಿದ್ದಾರೆ. ಜೀವನಶೈಲಿಯೇ ಇದಕ್ಕೆ ಮುಖ್ಯಕಾರಣ.
ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿರುವ ಡಿಎನ್‍ಎ ಆ ವ್ಯಕ್ತಿಯ ವೈಶಿಷ್ಟ್ಯತೆ ಮತ್ತು ಆರೋಗ್ಯವನ್ನುನಿರ್ಧರಿಸುತ್ತದೆ. ದೇಹದಲ್ಲಿರುವ ಪ್ರತಿಯೊಂದು ಪ್ರೋಟೀನ್ ಕಣವನ್ನುತೀರ್ಮಾನಿಸುವ ಜೈವಿಕ ಸಂಕೇತ ಇದು. ದೇಹ ಇಂಥದ್ದೊಂದು ಪ್ರೋಟೀನ್ ತಯಾರಿಸಬೇಕು ಎಂಬ ಸಂದೇಶವನ್ನು ನೀಡುವ ಪ್ರಕ್ರಿಯೆಗೆ ವೈದ್ಯಕೀಯ ಭಾಷೆಯಲ್ಲಿ ‘ಜೀನ್‍ಎಕ್ಸ್‍ಪ್ರೆಷನ್’ ಅಥವಾ ‘ಟ್ರಾನ್‍ಸ್ಕ್ರಿಪ್ಷನ್’ ಎನ್ನುತ್ತಾರೆ.
ದೇಹದಲ್ಲಿರುವ, ತಯಾರಾಗುವ ಪ್ರತಿಯೊಂದು ಪ್ರೋಟೀನ್‍ಕಣವೂ ನಮ್ಮಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ವಯಸ್ಸಾಗುತ್ತಿದ್ದಂತೆ ಡಿಎನ್‍ಎ ‘ಟ್ರಾನ್‍ಸ್ಕ್ರಿಪ್ಷನ್’ ನಿಧಾನವಾಗಿ ಸತ್ವ ಕಳೆದುಕೊಂಡು ಪ್ರೋಟೀನ್‍ಗಳು ಸರಿಯಾಗಿ ಉತ್ಪಾದನೆಯಾಗುವುದಿಲ್ಲ. ಈ ಕುರಿತು ವಿಸ್ಕೄ್ತ ಸಂಶೋಧನೆ ನಡೆಸಿದ ಯೂನಿಸಿಟಿ ಜಿನೊಮಿಸ್ಯುಟಿಕಲ್‍ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರಡಿ ಸಿದ್ಧಪಡಿಸಲಾದ ಉತ್ಪನ್ನಗಳು ಜೀನ್‍ಎಕ್ಸ್‍ಪ್ರೆಷನ್ ಸಮರ್ಪಕವಾಗುವಂತೆ ಮಾಡಿಆರೋಗ್ಯಕರ ಶರೀರವನ್ನುಕಾಪಾಡಲು ಸಹಕಾರಿಯಾಗುತ್ತದೆ.
ಜಿನೊಮಿಸ್ಯುಟಿಕಲ್ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದ ಅಚ್ಚರಿಎಂದು ಪರಿಗಣಿಸಲಾಗುತ್ತಿದೆ. ಬಾಹ್ಯ ಅಂಶಗಳನ್ನು ಪರಿಗಣಿಸಿ ಶರೀರವನ್ನುಅದಕ್ಕೆತಕ್ಕಂತೆ ಮಾರ್ಪಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ.
ಜಿನೊಮಿಸ್ಯುಟಿಕಲ್ ದೇಹದ ಒಟ್ಟಾರೆ ಜೀವ ರಾಸಾಯನಿಕಕ್ರಿಯೆಯನ್ನು ಸುಸ್ಥಿತಿಯಲ್ಲಿಡುತ್ತದೆ.
ದೇಹದಲ್ಲಿ ಜೀನ್‍ಗಳು ಎಲೆಕ್ಟ್ರಿಕ್ ಸ್ವಿಚ್‍ಗಳಂತೆ ಕೆಲಸ ಮಾಡುತ್ತವೆ. ಅವು ಆನ್‍ಆಗಿವೆಯೇಆಫ್‍ಆಗಿವೆಯೇಎಂಬುದನ್ನು ಆಧರಿಸಿ ದೇಹಕ್ಕೆ ವಿವಿಧ ಬಗೆಯ ಸಂದೇಶಗಳನ್ನು ರವಾನಿಸುತ್ತವೆ. ಕಾಲ ಸರಿದಂತೆ ನಮ್ಮ ಜೀನ್‍ಗಳು ಮತ್ತು ದೇಹದ ನಡುವಣ ಸಂವಹನ ಹಳಿ ತಪ್ಪುತ್ತದೆ. ದುರಭ್ಯಾಸಗಳು, ಸುತ್ತಮುತ್ತಲಿನ ಪರಿಸರದ ಅಂಶಗಳು, ಒತ್ತಡ ಮತ್ತು ಅಸಮರ್ಪಕ ನಿದ್ರೆಇತ್ಯಾದಿ ಇದಕ್ಕೆಕಾರಣ. ದೇಹ ಮತ್ತುಜೀನ್ ನಡುವಣ ಸಂವಹನ ಮುರಿದಾಗ ಜೀನ್‍ಗಳು ಸ್ತಬ್ಧವಾಗುತ್ತವೆ.
ಜೀನ್‍ಗಳು ಹೀಗೇಗೆ ಸ್ತಬ್ಧವಾಗುತ್ತವೆಎಂಬುದಕ್ಕೆಎಲ್ಲ ಕಾರಣಗಳು ವಿಜ್ಞಾನಿಗಳಿಗೆ ಇನ್ನೂಗೊತ್ತಾಗಿಲ್ಲ. ಆದರೆಆರೋಗ್ಯಕಾರಿ ಜೀನ್‍ಗಳನ್ನು ಹುಟ್ಟುಹಾಕಬಹುದುಎಂದು ಹಲವು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಕೆಲವೊಂದು ಬಗೆಯ ಗಿಡಮೂಲಿಕೆಗಳಲ್ಲಿರುವ ಪೌಷ್ಠಿಕ ಸಂಯುಕ್ತಗಳನ್ನು ಬಳಸಿ ದೀರ್ಘಾವಧಿಯವರೆಗೆ ಆರೋಗ್ಯವಂತ ಜೀನ್‍ಗಳನ್ನು ಉಳಿಸಿಕೊಳ್ಳಬಹುದು.
ಸಸ್ಯಗಳಲ್ಲಿರುವ ಇಂಥ ಸಂಯುಕ್ತಗಳನ್ನು ಬಳಸಿ ಆರೋಗ್ಯಕಾರಿ ಜೀನ್‍ಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಬಗ್ಗೆ ಯೂನಿಸಿಟಿ ಸಂಶೋಧನೆ ನಡೆಸುತ್ತಿದೆ. ಇದರ ಫಲವೇ ಜಿನೊಮಿಸ್ಯುಟಿಕಲ್ ಉತ್ಪನ್ನಗಳು.
ಆರೋಗ್ಯಕ್ಷೇತ್ರದಲ್ಲಿ 114 ವರ್ಷಗಳ ಹಿನ್ನೆಲೆ ಹೊಂದಿರುವ ಅಮೆರಿಕದ ಯೂನಿಸಿಟಿ ಇಂಟರ್‍ನ್ಯಾಷನಲ್ ಮಂಗಳೂರಿಗೆ ಕಾಲಿಟ್ಟಿದೆ. ಜನರ ಆರೋಗ್ಯವನ್ನು ನಿರ್ಧರಿಸುವ ದೇಹದ ಪ್ರೋಟೀನ್‍ಗಳಿಗೆ ಕಾರಣವಾಗುವ ವರ್ಣತಂತುಗಳನ್ನು (ಜೀನ್) ನಿಯಂತ್ರಿಸುವ ವಿಶ್ವದ ಮೊದಲ ‘ಜಿನೊಮಿಸ್ಯುಟಿಕಲ್’ ಉತ್ಪನ್ನಗಳು ಮಂಗಳೂರು ಮಾರುಕಟ್ಟೆಯಲ್ಲಿ ದೊರೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೂನಿಸಿಟಿ ಇಂಡಿಯಾದ ಹಿರಿಯ ಅಧಿಕಾರಿ ಬಿಕಾಶ್ ಪ್ರಧಾನ್ “ವಿಶ್ವಾದ್ಯಂತ ತ್ವಚೆ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ಪರಿಹಾರವೊಂದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೂರ್ಯನ ಅತಿನೇರಳೆ ಕಿರಣಗಳು ಮತ್ತು ಜೀವನಶೈಲಿ ಅಂಶಗಳಿಂದಾಗಿ ತ್ವಚೆ ಹಾನಿಗೀಡಾಗುತ್ತದೆ. ಯೂನಿಸಿಟಿ ಇದಕ್ಕಾಗಿ ನೀಜಿನ್ ಪರಿಚಯಿಸಿದೆ. ತ್ವಚೆಯಆರೋಗ್ಯವನ್ನು ನಿರ್ಧರಿಸುವ ಜೀನ್‍ಗಳನ್ನೇ ಗುರಿಯಾಗಿಟ್ಟುಕೊಂಡುಇದು ಕೆಲಸ ಮಾಡುತ್ತದೆ. ಇದು ನಮ್ಮ ಮೊದಲ ಜಿನೊಮಿಸ್ಯುಟಿಕಲ್‍ಉತ್ಪನ್ನ. ಶರೀರದ ಇತರ ಭಾಗಗಳ ಆರೋಗ್ಯಕ್ಕೂ ಸೂಕ್ತ ಪರಿಹಾರ ಕಂಡುಕೊಳ್ಳುವತ್ತ ಸಂಶೋಧನಗಳನ್ನು ಯೂನಿಸಿಟಿ ನಡೆಸುತ್ತಿದೆ” ಎಂದು ತಿಳಿಸಿದರು.
ಯೂನಿಸಿಟಿ 2010ರಲ್ಲಿ ಭಾರತದಲ್ಲಿ ವಹಿವಾಟು ಆರಂಭಿಸಿತು. ಜಿನೊಮಿಸ್ಯುಟಿಕಲ್ ಉತ್ಪನ್ನಗಳನ್ನು ಇದೇ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಮುಂದಿನ 2- 3 ವರ್ಷಗಳಲ್ಲಿ ಜಿನೊಮಿಸ್ಯುಟಿಕಲ್ ಉತ್ಪನ್ನಗಳ ವಿಶಾಲ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.