UN NETWORKS
ಉಳ್ಳಾಲ: ನೇಪಾಲ ಮೂಲದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಚಾರ ನಡೆಸಿದ ಆರೋಪದಲ್ಲಿ ನೇಪಾಲ ಮೂಲದ ಯುವಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು ಬಂಧಿತ ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತೊಕ್ಕೊಟ್ಟಿನಲ್ಲಿ ಫಾಸ್ಟ್ ಫುಡ್ ಮಾಡುತ್ತಿರುವ ದೇರಳಕಟ್ಟೆಯಲ್ಲಿ ವಾಸವಾಗಿರುವ ನೇಪಾಲ ನಿವಾಸಿ ಕುಮ್ಮ ಸಿಂಗ್(22) ಬಂಧಿತ ಆರೋಪಿಯಾಗಿದ್ದು, ಈತ ಕಳೆದ ಆರು ತಿಂಗಳಿನಿಂದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ.
ದೇರಳಕಟ್ಟೆಯ ಬಾಡಿಗೆ ಮನೆಯಲ್ಲಿ ನೇಪಾಲ ಮೂಲದ ಮೂರು ಕುಟುಂಬಗಳು ವಾಸವಾಗಿದ್ದು, ಬಾಲಕಿ ತನ್ನ ತಾಯಿ ತಂದೆಯೊಂದಿಗೆ ವಾಸವಾಗಿದ್ದರೆ, ಆರೋಪಿ ಕುಮ್ಮಸಿಂಗ್ ಮತ್ತು ಆತನ ಸಹೋದರ ಇದೇ ಮನೆಯಲ್ಲಿ ವಾಸವಾಗಿದ್ದರು. ಆದರೆ ಕುಮ್ಮ ಸಿಂಗ್ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಬಾಲಕಿ ಬಸುರಿಯಾದ ವಿಚಾರ ತಿಳಿದು ತಲೆಮರೆಸಿಕೊಂಡಿದ್ದ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಕೊಣಾಜೆ ಪೊಲೀಸರು ಕೊಣಾಜೆ ಪ್ರಭಾರ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಅವರ ಮಾರ್ಗದರ್ಶನದಲ್ಲಿ ಎಸ್‍ಐ ಸುಕುಮಾರ್ ಮತ್ತು ಸಿಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ.