UN NETWORKS
ಉಳ್ಳಾಲ: ಕುಂಪಲ ಸರ್ಕಾರಿ ಪ್ರೌಢಶಾಲೆ (ಆರ್‍ಎಂಎಸ್‍ಎ) ವಿಜ್ಞಾನ ಸಂಘದ ವತಿಯಿಂದ 50 ವಿದ್ಯಾರ್ಥಿಗಳು ಕುಲಶೇಖರದಲ್ಲಿ ಕೆ.ಎಂ.ಎಫ್‍ಗೆ ಭಾನುವಾರ ಭೇಟಿ ನೀಡಿದರು.
ಹಾಲಿನ ಪ್ಯಾಕಿಂಗ್, ಉತ್ಪನ್ನಗಳ ತಯಾರಿಕೆ ಸಹಿತ ಸಮಗ್ರ ಮಾಹಿತಿಯನ್ನು ತರಬೇತುದಾರ ಹುಸೈನ್ ಅವರ ಮುಖಾಂತರ ಕಲೆ ಹಾಕಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ರಾಧಿಕಾ ಎಸ್.ರಾವ್, ಸಹಶಿಕ್ಷಕಿಯರಾದ ಸುಮಾನ ಕುಂದರ್, ತೆರೆಜಾ ಲೀನಾ, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲ್ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ವಿನೋದ್ ಕುಂಪಲ ಸಹಕರಿಸಿದರು.