Site icon Ullalavani

ಆ.24 ಮತ್ತು ಆ.25ರವೆರೆಗೆ ಕೋಟೆಕಾರು ಶೃಂಗೇರಿ ಮಠದಲ್ಲಿ ಗೌರಿ-ಗಣೇಶ

UN NETWORKS

ಕೋಟೆಕಾರು: ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಂ ಇದರ ಕೋಟೆಕಾರು ಶಾಖೆಯ ವತಿಯಿಂದ ಆ.24 ಮತ್ತು ಆ.25ರವೆರೆಗೆ ಗೌರಿ ಹಬ್ಬ ಮತ್ತು ಶ್ರೀ ಗಣೇಶ ಹಬ್ಬ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ.

ಕೋಟೆಕಾರಿನಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.24ರ ಪೂರ್ವಾಹ್ನ 8.30ಕ್ಕೆ ಶ್ರೀ ಗೌರಿ ವಿಗ್ರಹದ ಪ್ರತಿಷ್ಠೆ, ಲಲಿತಾ ಹೋಮದ ಆರಂಭ, ಬೊಳ್ಳಾವ ವಿದ್ಯಾಶಂಕರವರಿಂದ ಕರ್ನಾಟಕ ಸಂಗೀತ ಕಚೇರಿ, ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಹರ್ಷ ಕುಮಾರ್ ಕೇದಗೆ ಮತ್ತು ಕನಕವಲ್ಲಿ ಹೆಚ್. ಕೇದಗೆ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಆನೆಗುಂದಿ ಮಹಾಸಂಸ್ಥಾನಂ, ಸರಸ್ವತಿ ಪೀಠ ಕಟಪಾಡಿಯ ಗೌರವಾರ್ಧಯಕ್ಷ ಕೆ.ಕೇಶವ ಆಚಾರ್ಯ, ನ್ಯಾಯವಾದಿ ಅನಿಲ್ ಬೇಕಲ್, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪಾರ್ ಪತ್ತಿಗೆದಾರರಾದ ಪಿ. ಲಕ್ಷ್ಮೀನಾರಾಯಣ ರಾವ್, ಆರ್ಯ ಮರಾಠ ಸಮಾಜ ಸಂಘ ಮಂಗಳೂರು ಮತ್ತು ಕಾಸರಗೋಡಿನ ಉಪಾಧ್ಯಕ್ಷ ನಾಗೇಶ್ವರ ರಾವ್ ಪವಾರ್, ಒಕ್ಕಲಿಗ ಸಮಾಜ ಪನಿಯಾಲ ಇದರ ಅಧ್ಯಕ್ಷ ಕೆ.ಭಾಸ್ಕರ, ನ್ಯಾಯವಾದಿ ಸಹನಾ ಎಸ್.ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪೂಜೆ ಬಳಿಕ ಸಮಂಗಲಿಯರಿಗೆ ಬಾಗಿನ ಸಮರ್ಪಣೆ ಬಳಿಕ ಕು. ಸಹಾನಾ, ಕು.ಜ್ಯೋತಿ ನಾಯರ್, ಕು.ರಶ್ಮಿ, ಕು.ಲಿಖಿತಾ, ಕು.ಅನನ್ಯಾ, ಕು.ಅರ್ಪಿತಾ ಹಾಡುಗಾರಿಕೆಯಲ್ಲಿ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ.

ಆ.25 ರಂದು 8.30ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ ಪೂರ್ವಾಹ್ನ ಅಥರ್ವಶೀರ್ಷ ಹೋಮದ ಆರಂಭ, ಪೂರ್ವಾಹ್ನ 10 ರಿಂದ ವಿದ್ವಾನ್ ಬೊಳ್ಳಾವ ನಾರಾಯಣಿ ಸತ್ಯಶಂಕರ ಃಆಡುಗಾರಿಕೆಯಲ್ಲಿ ಕರ್ನಾಟಕ ಸಂಗೀತ ಕಚೇರಿ, ಸಂಜೆ ಕೀಲು ಕುದುರೆ ಕುಣಿತ, ಬಳಿಕ ಶ್ರೀ ಗೌರಿ ಗಣೇಶ ವಿಗ್ರಹಗಳ ಶೋಭಾಯಾತ್ರೆ , ಕೊನೆಯಲ್ಲಿ ಶ್ರೀ ಸೋಮೇಶ್ವರ ಕ್ಷೇತ್ರದ ರುದ್ರಪಾದೆಯ ಬಳಿ ಶ್ರೀ ಗೌರಿ ಗಣೇಶ ವಿಗ್ರಹಗಳ ವಿಸರ್ಜನೆ ನಡೆಯಲಿದೆ ಎಂದರು.

ಗೌರಿ ಗಣೇಶನನ್ನು ಜತೆಯಾಗಿ ಆಚರಿಸುವುದು ರಾಜ್ಯದಾದ್ಯಂತ ಕೋಟೆಕಾರಿನ ಶೃಂಗೇರಿ ಮಠದಲ್ಲಿ ಮಾತ್ರ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕಾಗಿದೆ ಎಂದು ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಹೇಳಿದರು.

ಈ ಸಂದರ್ಭ ಮಹಿಳಾ ವಿಭಾಗಗಳ ಮುಖ್ಯಸ್ಥೆ ಗೀತಾ ಉಪಸ್ಥಿತರಿದ್ದರು.

Exit mobile version