Site icon Ullalavani

ಕೊಲ್ಯ: ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

UN NETWORKS 

ಕೊಲ್ಯ: ಸೇವಾ ಭಾರತಿ ಉಳ್ಳಾಲ ಇದರ ವತಿಯಿಂದ ಉಳ್ಳಾಲ ಹೋಬಳಿ ವಲಯದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯು ಕೊಲ್ಯ ಶ್ರೀ ರಮಾನಂದಾಶ್ರಮದಲ್ಲಿ ಭಾನುವಾರ ನಡೆಯಿತು.

ಕೊಲ್ಯ ಶ್ರೀ ರಮಾನಂದಾಶ್ರಮದ ಅರ್ಚಕ ಶ್ಯಾಂಪ್ರಕಾಶ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಧ್ಯಕ್ಷತೆಯನ್ನು ನಾರಾಯಣ ಕುಂಪಲ ವಹಿಸಿದ್ದರು. ಪಾವೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಪ್ರಶಾಂತ್, ತೊಕ್ಕೊಟ್ಟು ಸೆಬೆಸ್ಟಿಯನ್ ಕಾಲೇಜಿನ ಕನ್ನಡ ಉಪನ್ಯಾಸಕ ಅರುಣ್, ಬೊಳ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಹರಿಪ್ರಸಾದ್ ತೀರ್ಪುಗಾರರಾಗಿದ್ದರು.

ರವಿಚಂದ್ರನ್, ರೋಹಿತ್, ಮಹೇಶ್ ಬಹುಮಾನ ವಿತರಿಸಿದರು. ಕುಂಪಲ ಶಾಲೆಯ ಮುಖ್ಯೋಪಾಧ್ಯಯರಾದ ವಿಶ್ವನಾಥ್ ಎಂ.ಕೆ ಪ್ರಸ್ತಾವನೆಗೈದರು, ಸುರೇಶ್ ಸ್ವಾಗತಿಸಿದರು.

Exit mobile version