UN NEWTWORKS
ನವದೆಹಲಿ: ದೇಶದ್ಯಾಂತ ತೀವ್ರ ಕುತೂಹಲ ಕೆರಳಿಸಿದ್ದ ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಬಹುಮತದ ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು
ರದ್ದುಗೊಳಿಸು ಮಹತ್ವದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದೆ.
ಸಿಜೆಐ ನೇತೃತ್ವದ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳ ಪೀಠದಲ್ಲಿ ಇಬ್ಬರು ಸದಸ್ಯರು ತ್ರಿವಳಿ ತಲಾಖ್ ಗೆ ಅನುಮೋದನೆ ನೀಡಿದ್ದು, ಉಳಿದ ಮೂವರು ನ್ಯಾಯಾಧೀಶರು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಯ್ ಲಲಿತ್, ಕುರಿಯನ್ ಜೋಸೆಫ್ ಹಾಗೂ ರೋಹಿಂಗ್ಟನ್ ಅವರು ಎಂದು ಹೇಳಿ ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿ ಬಹುಮತದ ತೀರ್ಪು ನೀಡಿದ್ದಾರೆ. ಅದರಂತೆ ಬಹುಮತದ ಆಧಾರದ ಮೇಲೆ ತ್ರಿವಳಿ ತಲ್ಲಾಖ್ ಅನ್ನು ಮುಂದಿನ 6 ತಿಂಗಳ ಕಾಲ ರದ್ದು ಮಾಡಲಾಗಿದ್ದು, 6 ತಿಂಗಳೊಳಗೆ ಈ ಬಗ್ಗೆ ಸೂಕ್ತ ಕಾನಾನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತ್ರಿವಳಿ ತಲಾಖ್‍ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಒಟ್ಟುಗೂಡಿಸಿ ಸತತ ಆರು ದಿನ ವಿಚಾರಣೆ ನಡೆಸಿತ್ತು. ಮೇ 18ರಂದು ವಿಚಾರಣೆ ಪೂರ್ಣಗೊಂಡಿತ್ತು. ತೀರ್ಪು ಕಾಯ್ದಿರಿಸಲಾಗಿತ್ತು.