Site icon Ullalavani

ಸೋಮೇಶ್ವರದಲ್ಲಿ ಶ್ರಾವಣ ಅಮವಾಸ್ಯೆ

UN NETWORKS

ಸೋಮೇಶ್ವರ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮವಾಸ್ಯೆ ಪ್ರಯುಕ್ತ ಸಾವಿರದಷ್ಟು ಮಂದಿ ಸಮುದ್ರದಲ್ಲಿ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ರೋಗ ಬಾಧೆಗಳ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸಿಕೊಂಡರು.

ಖಗ್ರಾಸ ಸೂರ್ಯ ಗ್ರಹಣವಿದ್ದರೂ, ಭಾರತಕ್ಕೆ ವಿಶೇಷ ಫಲವಿಲ್ಲವೆಂದು ಜ್ಯೋತಿಷಿಗಳ ಅಭಿಪ್ರಾಯಗಳಾಗಿದ್ದರಿಂದಾಗಿ ಶ್ರಾವಣ ಅಮಾವಸ್ಯೆಗೆ ತೀರ್ಥ ಸ್ನಾನ ಮಾಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿರಲಿಲ್ಲ. ಜಿಲ್ಲೆ ಮತ್ತು ಹೊರಜಿಲ್ಲೆಗಳಿಂದ ಆಗಮಿಸಿದ ಭಕ್ತಾಧಿಗಳು ದೇವಸ್ಥಾನದ ಉತ್ತರದಲ್ಲಿರುವ ಗದಾತೀರ್ಥ ಕೆರೆಯಲ್ಲಿ ಮಿಂದು, ಬಳಿಕ ಸಂಪ್ರದಾಯದಂತೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಸಮುದ್ರಕ್ಕೆ ಸಲ್ಲಿಸಿದ ನಂತರ ಸಮುದ್ರದ ನೀರಿನಲ್ಲಿ ತೀರ್ಥಸ್ನಾನಗೈದರು.. ಬೆಳಿಗ್ಗೆ 4 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ  ಜಿಲ್ಲೆ ಮತ್ತು ಹೊರಜಿಲ್ಲೆಯ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದರು. ಕಡಲತಡಿಗೆ ತೆರಳಿ ಸಮುದ್ರ ಗಂಗಾ ಮಾತೆಗೆ ನಮಸ್ಕರಿಸಿ ವರ್ಷದ ಪಾಪ ವಿಮೋಚನೆಗೆ ಪ್ರಾರ್ಥಿಸುವುದು ಮತ್ತು ಚರ್ಮ ರೋಗಗಳ ನಿವಾರಣೆಯ ಸಲುವಾಗಿ ಉಪ್ಪು ನೀರಿನಲ್ಲಿ ತೀರ್ಥಸ್ನಾನಗೈಯ್ಯುತ್ತಾರೆ ಅನ್ನುವುದು ಹಿರಿಯರ ಅಭಿಪ್ರಾಯ.

ಸಮುದ್ರದ ನೀರಿನಲ್ಲಿ 5 ಮತ್ತು 7 ಬಾರಿ ಮುಳುಗುತ್ತಾರೆ. ಬಳಿಕ ಗದಾತೀರ್ಥ ಕೆರೆಯಲ್ಲಿ ಸಿಹಿ ನೀರು ಸ್ನಾನಗೈದು , ಉತ್ತರ ಬಾಗಿಲಿನ ಮುಖೇನ ಮೇಲೆ ದೇವಸ್ಥಾನ ಹತ್ತುತ್ತಾರೆ. ಅಲ್ಲಿ ಮೊದಲಿಗೆ ಮಹಾವಿಷ್ಣು, ಗಣಪತಿ, ಪರಶುರಾಮ ಮತ್ತು ಶ್ರೀ ಕೃಷ್ಣ ದೇವರಿಗೆ ನಮಿಸಿ ಒಳಗಿನ ಶ್ರೀ ದುರ್ಗಾ ಮತ್ತು ಶಿವನಿಗೆ ವಂದಿಸುವುದರ ಜತೆಗೆ ಉತ್ತರ ಭಾಗದಲ್ಲಿರುವ ಕಲ್ಲು ರ್ಟಿ ಕಲ್ಕುಡ ದೈವಗಳಿಗೂ ನಮಿಸುತ್ತಾರೆ. ಐತಿಹ್ಯದ ಪ್ರಕಾರ ಸಿಹಿ ನೀರಿನಲ್ಲಿ ಮೈಯಲ್ಲಿ ಉಪ್ಪುನೀರಿನ ಅಂಶ ಹಾಗೆಯೇ ಉಳಿದಿರಬೇಕು. ಅದಕ್ಕಾಗಿ ಕೊನೆಯದಾಗಿ ಉಪ್ಪು ನೀರಿನಲ್ಲಿ ಸ್ನಾನ ಮಾಡಿ ಅದು ಸಂಜೆಯವರೆಗೂ ಮೈಯಲ್ಲಿರುವಂತೆ ಇಡುವುದರಿಂದ ಉತ್ತಮ ಪರಿಣಾವiಗಳು ಆರೋಗ್ಯಕ್ಕೆ ಒದಗುವುದು ಅನ್ನುವುದು ವಸಂತ್ ಉಳ್ಳಾಲ್ ಎಂಬವರ ಅಭಿಪ್ರಾಯ.

ಜೀವರಕ್ಷಕ ದಳದ ಸಹಕಾರ : ಸೋಮೇಶ್ವರ ತೀರದ ಸಮುದ್ರದ ಅಲೆಗಳ ರಭಸ ಹೆಚ್ಚಿರುವುದರ ಹಿನ್ನೆಲೆಯಲ್ಲಿ ಭಕ್ತರಿಗೆ ತೀರ್ಥಸ್ನಾನಗೈಯ್ಯಲು ಕಳೆದ 25 ವರ್ಷಗಳಿಂದ ಉಳ್ಳಾಲ ಜೀವರಕ್ಷಕ ದಳದ ಸದಸ್ಯರು ಸಹಕರಿಸುತ್ತಿದ್ದಾರೆ. ಮಕ್ಕಳು, ವೃದ್ಧರು, ಮಹಿಳೆಯರನ್ನು ಸಮುದ್ರದ ಅಲೆಗಳ ನಡುವೆ ಕೊಂಡೊಯ್ದು ತೀರ್ಥಸ್ನಾನಗೈಯ್ಯಲು ತಂಡದ 25 ಮಂದಿ ಸಹಕರಿಸಿದರು. ಪ್ರತಿವರ್ಷವೂ ನಿಸ್ವಾರ್ಥ ಸೇವೆ ಜೀವರಕ್ಷಕ ದಳದ ಸದಸ್ಯರದ್ದಾಗಿದೆ. ಈ ವರ್ಷ ಸೋಮೇಶ್ವರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ತೀರ್ಥಸ್ನಾನಕ್ಕೆ ಬಂದ ಭಕ್ತರಿಗೆ ಫಲಹಾರ ವಿತರಣೆ ಪ್ರಥಮವಾಗಿತ್ತು, ಗದಾಥೀರ್ಥದ ಬಳಿ ಕೌಂಟರ್ ತೆರೆದು ಸದಸ್ಯರು ಉಚಿತ ಸೇವೆಯನ್ನು ಒದಗಿಸಿದರು.

ಕತ್ತಿ ಮಾರಾಟ: ಶ್ರಾವಣ ಅಮವಾಸ್ಯೆ ಸಂದರ್ಭ ಕತ್ತಿ ಮಾರಾಟ ಹಿಂದಿನಿಂದಲೂ ಬಂದ ವ್ಯಾಪಾರವಾಗಿದೆ. ಕೃಷಿ ಮುಗಿದು, ತೋಟಕ್ಕೆ ಸೊಪ್ಪು ಕಡಿಯುವ ಸಮಯವಾಗುವುದರಿಂದ, ಕೃಷಿಕರು ಹೆಚ್ಚಾಗಿ ಕತ್ತಿಗಳನ್ನು ಖರೀದಿಸುತ್ತಿತ್ತಾರೆ, ಇ ಬಾರಿಯೂ ಕತ್ತಿ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರೂ, ಬೆಲೆ ಅಧಿಕವಾಗಿರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು.

ವಿಶಿಷ್ಟವಾದ ಆಚರಣೆ: ಪ್ರಥಮವಾಗಿ ಇಂತಹ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ತೆಂಗಿನ ಕಾಯಿ, ಬಾಳೆಕಾಯಿ ಹಿಡಿದುಕೊಂಡು ಪೂಜೆ ನೆರವೇರಿಸಿ, ಸಮುದ್ರ ಸ್ನಾನಗೈಯ್ಯುವುದು ಒಂದು ವಿಚಿತ್ರ ಅನುಭವವನ್ನು ನೀಡಿದೆ. ಎಲ್ಲಿಯೂ ಇಲ್ಲದ ಸಂಸ್ಕøತಿ ಭಾರತದಲ್ಲಿ ನೋಡಲು ಸಂತಸ ಕೊಡುತ್ತದೆ. ಬಿಸಿಯ ವಾತಾವರಣ ಬಿಟ್ಟರೆ, ಇಲ್ಲಿನ ಜನ ಮಾನವೀಯತೆಯಿಂದ ಇರುವವರಾಗಿದ್ದು, ವಾತಾವರಣವೇ ಖುಷಿಯನ್ನು ಕೊಡುತ್ತದೆ.

ಈಟಾ ಮತ್ತು ಲಾಗಾ
ವಿದೇಶಿಗರು
ಸಮಾಜ ಸೇವಾ ಕಾರ್ಯಕರ್ತರು
ಜರ್ಮನಿ

Exit mobile version