UN NETWORKS
ಅಸೈಗೋಳಿ: ಅಸೈಗೋಳಿ ಕೇಂದ್ರ ಮೈದಾನದಲ್ಲಿ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಕಬ್ಬಿಣದ ತಗಡು ಶೀಟಿನ ಚಪ್ಪರವೊಂದು ಏಕಾಏಕಿ ಕುಸಿದು ಬಿದ್ದ ಘಟನೆ ಶನಿವಾರ ಸಂಜೆ ಸಂಭವಿಸಿದ್ದು, ಘಟನೆ ವೇಳೆ ಚಪ್ಪರದ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ.
ಅಸೈಗೋಳಿಯ ಮೈದಾನದಲ್ಲಿ ಇತ್ತೀಚೆಗೆ ಮೊಸರು ಕುಡಿಕೆ ಉತ್ಸವ ನಡೆದಿದ್ದು ಇದಕ್ಕಾಗಿ ಶೀಟಿನ ಚಪ್ಪರವನ್ನು ಹಾಕಲಾಗಿತ್ತು. ಅಲ್ಲದೆ ಮುಂದಿನ ವಾರ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೂ ಇದೇ ಚಪ್ಪರವನ್ನು ಇಡಲು ನಿರ್ಧರಿಸಲಾಗಿತ್ತು. ಇದೇ ವೇಳೆ ಚಪ್ಪರವನ್ನು ಇನ್ನಷ್ಟು ವಿಸ್ತರಿಸುತ್ತಿದ್ದ ವೇಳೆ ಕಬ್ಬಿಣದ ರಾಡ್ ಸಹಿತ ಚಪ್ಪರವು ಹಠಾತ್ತನೆ ಕುಸಿದು ಬಿದ್ದಿದೆ. ಕೂಡಲೇ ಚಪ್ಪರದಡಿಯಲ್ಲಿದ್ದ ಕಾರ್ಮಿಕರು ಓಡಿ ಜೀವವನ್ನು ರಕ್ಷಿಸಿಕೊಂಡಿದ್ದಾರೆ. ಒಂದು ವೇಳೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಚಪ್ಪರ ಕುಸಿದು ಬೀಳುತ್ತಿದ್ದ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು.