UN NETWORKS
ಉಳ್ಳಾಲ: ಅಂಬ್ಲಮೊಗರು ಗ್ರಾಮದ ಕೋಟೆದಡಿ ಬಾಕಿಮಾರ್ ಪರಿಸರದಲ್ಲಿ ಶನಿವಾರ ಗಾಳಿ ಮಳೆಗೆ ಮರಗಳು ಬಿದ್ದು, ಒಂದು ಮನೆ, ದೈವಸ್ಥಾನ ಮತ್ತು ಒಂದು ದನದ ಕೊಟ್ಟಿಗೆಗೆ ಹಾನಿಯಾಗಿದ್ದು ಸುಮಾರು 7 ಲಕ್ಷ ರೂ, ನಷ್ಟ ಆಂದಾಜಿಸಲಾಗಿದೆ.
ಪದ್ಮನಾಭ ಕೋಟೆದಡಿ ಅವರ ಮನೆಗೆ ಹಾನಿಯಾಗಿದ್ದು ಸುಮಾರು 5 ಲಕ್ಷ ನಷ್ಟವದರೆ, ಲೋಕಯ್ಯ ಪೂಜಾರಿ ಅವರ ಮನೆಯ ಎದುರಿನ ದೈವಸ್ಥಾನಕ್ಕೆ ಹಾನಿಯಾಗಿದ್ದು, ಅಗಸ್ತಿನಾ ಡಿ.ಸೋಜ ಅವರ ಮನೆಯ ಕೊಟ್ಟಿಗೆಗೆ ಹಾನಿಯಾಗಿದ್ದರಿಂದ ಸುಮಾರು 2 ಲಕ್ಷರೂ. ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಆಂಬ್ಲಮೊಗರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದರು.