Site icon Ullalavani

ಎಲ್ಲಾ ಜಾತಿಗಳು ಸಂಘಟಿತವಾದರೆ ಫ್ಯಾಸಿಸ್ಟ್ ಗಳನ್ನು ಎದುರಿಸಬಹುದು:ಎಸ್‍ಡಿಪಿಐ

UN NETWORKS

ಉಳ್ಳಾಲ:ಆರ್‍ಎಸ್‍ಎಸ್ ಕೃಪಾಪೋಷಿತ ಸಂಘಟನೆಗಳು ಇಲ್ಲಿರುವ ಮುಸ್ಲಿಂ, ಕ್ರೈಸ್ತರ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈ ಎಲ್ಲಾ ಜಾತಿಗಳು ಸಂಘಟಿತವಾದರೆ ಮಾತ್ರ ಫ್ಯಾಸಿಸ್ಟ್ ಶಕ್ತಿಗಳನ್ನು ಎದುರಿಸಲು ಸಾಧ್ಯ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅಭಿಪ್ರಾಯಪಟ್ಟರು.

ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಜನತೆಯ ಅಭಿಯಾನದ ಅಂಗವಾಗಿ ಆ, 1ರಿಂದ ಆ.25ರವರೆಗೆ ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಭಾರತದ ನೋವು ಭರಿತ ರಕ್ತ ಸುರಿಯುತ್ತದೆ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ತೊಕ್ಕೊಟ್ಟು ಜಂಕ್ಷನ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆ ಹಾಗೂ ರ್ಯಾಲಿಯಲ್ಲಿ ಭಾಗವಹಿಸಿ ಪ್ರಧಾನ ಭಾಷಣ ಮಾಡಿದರು.

ಗೋರಕ್ಷಣೆಯ ಹೆಸರಲ್ಲಿ ಹೊಸ ಅಜೆಂಡಾದ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ. ಇದರ ಹಿಂದೆ ಭಾರತವನ್ನು ಹಿಂದೂ ಫ್ಯಾಸಿಸ್ಟ್ ರಾಷ್ಟ್ರವನ್ನಾಗಿ ಮಾಡುವ ಸಂಘ ಪರಿವಾರ ನಡೆಸಿರುವ ಅಜೆಂಡಾದ ಭಾಗವೇ ಈ ಗುಂಪು ಹಿಂಸಾ ಹತ್ಯೆಯಾಗಿದ್ದು, ಇದರ ವಿರುದ್ಧ ಆ. 25ರಂದು ಮನೆಯಿಂದ ಹೊರಗೆ ಬನ್ನಿ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದ ಅವರು ಎಲ್ಲೆಲ್ಲಿ ಹಿಂಸಾಚಾರದಿಮದ ನಲುಗಿದವರನ್ನು ಎಸ್‍ಡಿಪಿಐ ಪ್ರತಿನಿಧಿಗಳು ಭೆಟಿ ನೀಡಿ ಅವರಿಗೆ ಧೈರ್ಯ ತುಂಬುವ ಕಾರ್ಯ ನಡೆಸಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಸೋಷಿಯಲ್ ಡೆಮಾಟ್ರಿಕ್ ಪಕ್ಷ ಲಕ್ಷಾಂತರ ಕಾರ್ಯಕರ್ತರನ್ನು ಸಂಘಟಿಸುತ್ತಿದೆ ಎಂದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿ ಸಂಘ ಪರಿವಾರ ಸೇರಿದಂತೆ ಹಿಂದೂ ಸಂಘಟನೆಗಳಿಗೆ ಕೇರಳದಲ್ಲಿ ಗೋಮಾಂಸ ಹಲಾಲ್, ಕರ್ನಾಟಕದಲ್ಲಿ ಬಂದಾಗ ಹರಾಮ್ ಆದರೆ ಮೇಘಾಲಯದಲ್ಲಿ ಬಿಜೆಪಿಯವರೇ ಗೋಮಾಂಸ ನಿಷೇಧವನ್ನು ವಿರೋಧಿಸಿದ್ದು, ಈಶಾನ್ಯಾ ರಾಜ್ಯಗಳಲ್ಲಿ ಶೇ. 70ರಷ್ಟು ಮುಸ್ಲಿಮೇತರ ಹೋಟೆಲ್‍ಗಳಲ್ಲಿ ಗೋಮಾಂಸವನ್ನು ಮಾಡುತ್ತಾರೆ ಎಂದರು.

ದಲಿತ ಸಂಘರ್ಷ ಸಮಿತಿ ಪುತ್ತೂರು ಇದರ ಅಧ್ಯಕ್ಷ ಆನಂದ ಮಿತ್ತಬೈಲ್ ಮಾತನಾಡಿ ನಾವು ಭಾರತದಲ್ಲಿ ಹಿಂದೆ ಆಳಿದ ಸಾಮ್ರಾಟ ಆಶೋಕ, ಟಿಪ್ಪು ಸುಲ್ತಾನ್, ಸಾಹೂ ಮಹಾರಾಜ್, ಅಂಬೇಡ್ಕರ್ ಅವರ ಎಲ್ಲಾ ಕಾರ್ಯಕ್ಕೆ ಹೆಗಲು ನೀಡಿದ ಅಘಾ ಖಾನ್ ಅವರನ್ನು ನೆನಪಿಸುವ ಕಾರ್ಯ ಮಾಡಬೇಕು. ಅದರಲ್ಲೂ ದಲಿತರಿಗೆ ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಧರ್ಮಗ್ರಂಥವಾಗಿದ್ದು, ಅವರು ದಿನ ನಿತ್ಯದ ಚೇತನ ಮತ್ತು ಬೆಳಕು ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ಬಾಸ್ ಕಿನ್ಯ ವಹಿಸಿದ್ದರು.
ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯ ಸಿರಾಜ್ ಕಾವೂರು, ಉಳ್ಳಾಲ ವಲಯಾಧ್ಯಕ್ಷ ಸಿದ್ಧಿಕ್ ಯು.ಬಿ.ಮುಖಂಡರಾದ ರವೂಫ್ ಉಳ್ಳಾಲ್, ಬಶೀರ್ ಅಜ್ಜಿನಡ್ಕ, ಸಿದ್ಧಿಕ್ ಪಜೀರು, ಎಸ್‍ಡಿಪಿಐ ಉಳ್ಳಾಲ ನಗರಸಭಾ ಅಧ್ಯಕ್ಷ ಎ.ಆರ್. ಅಬ್ಬಾಸ್, ಮಂಗಳೂರು ಉತ್ತರ ವಿಧಾನ ಸಭಾ ಅಧ್ಯಕ್ಷ ಮುನೀಬ್ ಬೆಂಗ್ರೆ ಉಪಸ್ಥಿತರಿದ್ದರು.

ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಹಾರೀಸ್ ಮಲಾರ್ ಸ್ವಾಗತಿಸಿದರು. ಸಿದ್ಧಿಕ್ ಕುಂಪಲ ವಂದಿಸಿದರು. ಝಾಹೀದ್ ಮಲಾರ್ ಮತ್ತು ಝೈನ್ ಹರೇಕಳ ಕಾರ್ಯಕ್ರಮ ನಿರ್ವಹಿಸಿದರು.

Exit mobile version