Site icon Ullalavani

ದೇಶದ ಜನರನ್ನು ಪೀತಿಸೋಣ ಅದುವೇ ನಿಜವಾದ ದೇಶ ಪ್ರೇಮ ; ಕೆ.ಎಂ ಸಿದ್ದೀಕ್

UN NETWORKS

ಉಳ್ಳಾಲ: ಭಾರತದ ಮಣ್ಣನ್ನು ಪ್ರೀತಿಸುವುದು ಮಾತ್ರ ದೇಶ ಪ್ರೇಮವಲ್ಲ ಬದಲು ದೇಶದಲ್ಲಿ ಬದುಕು ಕಟ್ಟಿಕೊಂಡ ಸರ್ವ ಜಾತಿ, ಧರ್ಮ, ಪಂಗಡಗಳ ಜನರನ್ನು ಪ್ರೀತಿಸುವುದೇ ನಿಜವಾದ ದೇಶ ಪ್ರೇಮವಾಗಿದೆ ಎಂದು ಎಸ್ಸೆಸ್ಸೆಪ್ ರಾಷ್ಷೀಯ ಸಮಿತಿ ಪ್ರಧಾನ ಕಾರ್ಯದರ್ಶಿ,ರಾಜ್ಯ ಹಜ್ಜ್ ಸಮಿತಿ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು.

ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸ್ವಾತಂತ್ರೋತ್ಸವದ ಅಂಗವಾಗಿ “ದೇಶ ಉಳಿಸಿ, ದ್ವೇಷ ಅಳಿಸಿ” ಎಂಬ ಘೋಷಣೆಯೊಂದಿಗೆ ಒಂದು ತಿಂಗಳ ಆಭಿಯಾನದ ಭಾಗವಾಗಿ ನಡೆದ ಅಝಾದಿ ರ್ಯಾಲಿಯ ಸಮಾರೋಪ  ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

ದೇಶಾದ್ಯಂತ ಅಸಹಿಷ್ಣುತೆ ಬೆಳೆಯುತ್ತಿದ್ದು, ಇದನ್ನು ನಿಯಂತ್ರಿಸುವುದು ಸ್ವತಂತ್ರ ಭಾರತದ ಅತೀ ದೊಡ್ಡ ಸವಾಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ವಿರುವ ವಿವಿಧ ಧರ್ಮಗಳ ಮನುಷ್ಯರನ್ನು ಪ್ರೀತಿಸುವ ಕೆಲಸವಾಗಬೇಕಿದೆ. ದೇಶದ ಮಣ್ಣನ್ನು ಮಾತ್ರ ಪ್ರೀತಿಸಿದಲ್ಲಿ ದೇಶಪ್ರೇಮವಾಗುವುದಿಲ್ಲ, ಅದನ್ನು ಕಟ್ಟಬೇಕಾದ ಜನರನ್ನು ಪ್ರೀತಿಸುವವರು ಬೆಳೆಯಬೇಕಿದೆ ಎಂದರು.

ಕರ್ನಾಟಕ ಇಹ್ಸಾನ್ ಚೇರ್ ಮೆನ್ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಮುಖ್ಯ ಪ್ರಭಾಷಣಗ್ಯದರು. ಎಸ್ಸೆಸ್ಸೆಪ್ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್‍ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಪ್ ರಾಜ್ಯ ಕಾರ್ಯದರ್ಶಿ ಸುಫೀಯಾನ್ ಸಖಾಫಿ, ಹಾಫಿಲ್ ಯಹ್‍ಕೂಬ್ ಸಅದಿ ನಾವೂರ್. ಏಷ್ಯನ್ ಬಾವ , ಇಸ್ಮಾಯಿಲ್ ಸಅದಿ, ಉರುಮಣೆ ಇಶಾಕ್ ಝುಹ್ರಿ, ಕಾಂಗ್ರೇಸ್ ಮುಖಂಡರಾದ ಕಬೀರ್ ದೇರಳಕಟ್ಟೆ, ಕುಂಞ ಭಾವ ಕಲ್ಕಕಟ್ಟ, ಬಿಜೆಪಿ ಮುಖಂಡರಾದ ರಹೀಮ್ ಉಚ್ಚಿಲ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಮುನೀರ್ ಬಾವ ಪೊಟ್ಟೊಳಿಕೆ, ಇಸ್ಮಾಯಿಲ್ ಸಅದಿ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ನಿರೂೀಪಿಸಿ ವಂದಿಸಿದರು.

Exit mobile version