UN NETWORKS
ದೇರಳಕಟ್ಟೆ: ಎಸ್ ಇ ಝೆಡ್ ನಲ್ಲಿರುವ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿ. ನ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಹಾಗೂ ಹಿಂದುಸ್ತಾನ್ ಇಮಡಸ್ಟ್ರಿಯಲ್ ಸೇಫ್ಟಿ ಮತ್ತು ಮಲ್ಪೆ ಲರ್ನಿಂಗ್ ಜಂಟಿಯಾಗಿ ಶಿಬಿರವನ್ನು ಹಮ್ಮಿಕೊಂಡಿತ್ತು.
ಕೆ.ಎಸ್ ಹೆಗ್ಡೆ ವೈದ್ಯಕೀಯ ವಿಭಾಗದ ಅರ್ಥಶಾಶ್ತ್ರ ಪ್ರಾಧ್ಯಾಪಕ ಶ್ರೀಪಾದ ಜಿ ಮೆಹಂದಳೆ ಅವರು ತರಬೇತಿ ನಡೆಸಿಕೊಟ್ಟರು.
ಸೈಟ್ ಪ್ರಬಂಧಕ ಅವನೀಶ್ ಹಾಗೂ ಸೇಫ್ಟಿ ಅಧಿಕಾರಿ ಘನಿ ಮೊಹಮ್ಮದ್ ಉಪಸ್ಥಿತರಿದ್ದರು. 30 ಮಂದಿ ಕಾರ್ಮಿಕರು ಶಿಬಿರದಲ್ಲಿ ಪಾಲ್ಗೊಂಡರು.