Site icon Ullalavani

ಉಳ್ಳಾಲ ದರ್ಗಾದಲ್ಲಿ ಸ್ವಾತಂತ್ರ್ಯೋತ್ಸವ

UN NETWORKS

ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ದರ್ಗಾ ವಠಾರದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಉಳ್ಳಾಲ ಧ್ವಜಾರೋಹಣಗೈದರು.

ಈ ಸಂದರ್ಭ ಸಯ್ಯಿದ್ ಮದನಿ ಅರಬಿಕ್‍ಟ್ರಸ್ಟ್ ಮುಫತ್ತಿಶ್ ಸುಲೈಮಾನ್ ಸಖಾಫಿ, ಕಾಲೇಜು ಪ್ರಾಂಶುಪಾಲ ಇಬ್ರಾಹೀಮ್ ಅಹ್ಸನಿ, ಮಜೀದ್ ಸಖಾಫಿ, ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು. ಕೆ. ಇಲ್ಯಾಸ್, ಅಡಿಟರ್ ಯು. ಟಿ. ಇಲ್ಯಾಸ್, ಜತೆ ಕಾರ್ಯದರ್ಶಿ ನೌಶಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಉಪಾಧ್ಯಕ್ಷರಾದ ಯು. ಎಚ್. ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲೀ ಮೋನು, ಕುಂಞ ಅಹ್ಮದ್, ಮೊಯ್ದಿನಬ್ಬ ಪೇಟೆ. ಸೇರಿದಂತೆ ಹಲವು ಸಮಿತಿ ಸದಸ್ಯರು, ಜಮಾತ್ ಸದಸ್ಯರು ಉಪಸ್ಥಿತರಿದ್ದರು.

ಖತೀಬರಾದ ಶಮೀಮ್ ಸಖಾಫಿ, ದುಆಗೈದರು, ಸಯ್ಯಿದ್ ಮದನಿ ಕಾಲೇಜು ಆಫ್‍ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿಗಳಿಂದ ದೇಶ ಭಕ್ತಗೀತೆ, ಹಿಫ್ರುಲ್ ಕುರಾನ್ ವಿದ್ಯಾರ್ಥಿಗಳಿಂದ ಸ್ಕೌಟ್ ಪ್ರದರ್ಶನ ನಡೆಯಿತು.

Exit mobile version