Site icon Ullalavani

ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

UN NETWORKS

ಉಳ್ಳಾಲ: ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ವತಿಯಿಂದ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು, ಅಡ್ಕರೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಬಹುಮಾನ್ಯ ಹಂಝ ಸಖಾಫಿ ಅಲ್ ಅಝ್ಹರಿ ದುವಾ ನೆರವೇರಿಸಿದರು.

ಸಂಘದ ಅದ್ಯಕ್ಷ ರಾದ ಮಹಮ್ಮದ್ ನಿಯಾಝ್ ಧ್ವಜಾರೋಹಣ ಮಾಡಿದರು.

ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಭಾಷಣ ಮಾಡಿ ಮಾತಾನಾಡುತ್ತಾ ಪ್ರಸಕ್ತ ಸನ್ನಿವೇಶದಲ್ಲಿ ನಾವು ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ಇನ್ನೊಬ್ನರಿಗೆ ತೋರ್ಪಡಿಸುವ ಅನಿವಾರ್ಯತೆ ಬಂದಿದೆ, ದೇಶಕ್ಕಾಗಿ ಹಿಂದು ಮುಸಲ್ಮಾನರು ಒಗ್ಗಟ್ಟಾಗಿ ಹೋರಾಟ ಮಾಡಿ ತ್ಯಾಗ ಬಲಿದಾನದಿಂದ ನಮಗೆ ನಾವು ಸ್ವತಂತ್ರವಾಗಿ ಜೀವಿಸುವಂತೆ ಮಾಡಿರುತ್ತಾರೆ, ಆದರೆ ಇಂದು ನಾವು ಧರ್ಮದ ಹೆಸರಿನಲ್ಲಿ ಕಾದಾಡುತಿದ್ದೇವೆ, ಕೋಮುವಾದಿಗಳಿಗೆ ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ, ಅದು ನಮ್ಮ ರಕ್ತದ ಕಣಕಣದಲ್ಲೂ ಇದೆ , ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸದಾ ಸಿದ್ದ, ಎಂದರು, ವೇದಿಕೆಯಲ್ಲಿ ಅಡ್ಕರೆ ಪಡ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ರಾದ ಕೆ.ಯು. ಮುಹಮ್ಮದ್, ರಹ್ಮಾನಿಯಾ ಮದ್ರಸ ಅಡ್ಕರೆ ಪಡ್ಪು ಇದರ ಮುಖ್ಯೊಪಾದ್ಯಯರಾದ ಬಹುಮಾನ್ಯ ಅಶ್ರಪ್ ಸ ಅದಿ , ಬಹುಮಾನ್ಯ ಹಮೀದ್ ಮದನಿ, ಬಹುಮಾನ್ಯ ಇಸ್ಮಾಯಿಲ್ ಮುಸ್ಲಿಯಾರ್, ಮುಹಿಯುದ್ದೀನ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಸೈನಾರ್, ಹಿರಿಯರಾದ ಹುಸೈನ್, ಹಾಜಿ ಇಸ್ಮಾಯಿಲ್, ಬಿ.ಯೂಸುಫ್, ಹುಸೈನಾರ್ (ಪುತ್ತಾಕ) ಅಬೂಬಕರ್ ಹೊಸಗದ್ದೆ, ಸೈಟ್ ಪ್ರೆಂಡ್ಸಿನ ಉಸ್ಮಾನ್ ಸೈಟ್, ಹನೀಪ್, ಮುಂತಾದವರು ಉಪಸ್ಥಿತರಿದ್ದರು.

ಸಂಘದ ಉಪಾದ್ಯಕ್ಷರಾದ ಅಬ್ದುಲ್ ಖಾದರ್ ಧನ್ಯವಾದಗೈದರು, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬಿಪಿ ಧನ್ಯವಾದಗೈದರು.

Exit mobile version