UN NETWORKS
ಮಕ್ಕಾ: ಭಾರತದ 71ನೇ ಸ್ವಾತಂತ್ರೋತ್ಸವನ್ನು ಭಾರತದ ಹಜ್ಜಾಜಿಗಳೊಂದಿಗೆ ಪವಿತ್ರ ಮಕ್ಕಾದ ಮಣ್ಣಿನಲ್ಲಿ ಕರ್ನಾಟಕ ಕಲ್ಚರಲ್ ಪೌoಡೇಷನ್ ವಿಜೃಂಭಣೆಯಿಂದ ಆಚರಿಸಿತು.ಮಂಗಳೂರು ಈದ್ಗಾ ಜುಮಾ ಮಸ್ಜಿದ್ ಖತೀಬ್ ಸ್ವದಕತ್ತುಲ್ಲಾ ಮುಸ್ಲಿಯಾರ್ ಅವರು
ಧ್ವಜಾರೋಹಣ ನಿರ್ವಹಿಸಿದರು .
ಕೆಸಿಎಫ್ ಅಧೀನದಲ್ಲಿ ಕಾರ್ಯಚರಿಸುವ ಹೆಚ್.ವಿ.ಸಿಸ್ವಯಂ ಸೇವಕರನ್ನು ಉದ್ದೇಶಿಸಿ ಭಾರತದ ಹಜ್ಜಾಜಿಗಳ ಪ್ರಶಂಶನೀಯ ಮಾತುಗಳು
ಹಜ್ಜಾಜಿಗಳ ಸೇವೆಯಲ್ಲಿ ನಿರತಾರದ ಏಅಈ ಕಾರ್ಯಕರ್ತರು ಹಮ್ಮಿಕೊಂಡ ಭಾರತದ 71ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾವೆಲ್ಲಾ ಬಹಳಸಂತಸರಾಗಿದ್ದೇವೆ .
ಮುಹಮ್ಮದ್ ಮುಸ್ತಾಫ ಮಂಚಿಲ
(ಸಯ್ಯದ್ ಮದನಿ ಚಾರ್ಟೆಬಲ್ ಟ್ರಸ್ಟ್ ಕೇಂದ್ರ ಜುಮಾ ಮಸ್ಜಿದ್ ಉಳ್ಳಾಲ್ ಸದಸ್ಯರು)
ಕೆಸಿಎಫ್ ಕಾರ್ಯಕರ್ತರು ಹಜ್ಜಾಜಿಗಳಾದ ನಮಗೆ ನೀಡಿದ ಸಹಾಯಾ ಸಹಕಾರಗಳು ಖಂಡಿತವಾಗಿಯು ಜೀವನದಲ್ಲಿ ಮರೆಯಲು ಅಸಾಧ್ಯ.
ಮಾಜೀದ್ ಹಸನ್ ಹಾಸನ
(ಸರಕು ಉದ್ಯಮ್ಮಿ ಹಾಸನ)
ಹಗಲಿರುಳು ನಮ್ಮ ಕಟ್ಟಡಗಳಿಗೆ ಭೇಟಿ ನೀಡಿ ಅರೋಗ್ಯ ಕ್ಷೇಮ ಇನ್ನಿತರ ಕುಂದು ಕೊರತೆಗಳನ್ನು ವಿಚಾರಿಸುತ್ತಾ ನಮ್ಮೆಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಕೆಸಿಎಫ್
ಕಾರ್ಯಕರ್ತರಿಗೆ ಅಲ್ಲಾಹನು ಇನಷ್ಟು ಶಕ್ತಿನೀಡಲಿ
ಹುಸೈನ್ ಮುಸ್ಲಿಯಾರ್ ಕನ್ನಂಗಾರ್
(ಸಹಾಯಕ ಖತೀಬರು, ಕೇಂದ್ರ ಜುಮಾ ಮಸ್ಜಿದ್ ಕನ್ನಂಗಾರ್)
ಏಅಈ ಸಂಘಟನೆಯಿಂದ ಕರ್ನಾಟಕದ ಹಜ್ಜಾಜಿಗಳಿರುವ ಪ್ರತಿ ಕಟ್ಟಡಗಳಲ್ಲಿ ಉತ್ತಮ ಹಜ್ಜ್ ತರಗತಿ, ಆರೋಗ್ಯ ಪರೀಶೀಲನೆ, ಹೀಗೇ ಹಲವಾರು ಸೇವೆ ಹಜ್ಜಾಜಿಗಳಾದ ನಮಗೆ ದೊರೆಯುತ್ತಿವೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ.
ಅ. ಏ ಮುಸ್ಲಿಯಾರ್ ಕೂಡಗು
ಕಾರ್ಯಕ್ರಮಕ್ಕೆ ಆಗಮಿಸಿದ ಹಜ್ಜಾಜಿಗಳಿಗೆ ಪಾನೀಯ ಹಾಗೂ ಸಿಹಿತಿಂಡಿ ಹಂಚಲಾಯಿತು.
ವೇದಿಕೆಯಲ್ಲಿ ಹೆಚ್.ವಿ.ಸಿ ಕೋ ಆರ್ಡಿನೇಟರ್ ಮೂಸಾ ಹಾಜಿ ಕಿನ್ಯಾ, ಕೆಸಿಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್ ,ಹಾಗೂ ಮತ್ತಿತರ ಹೆಚ್.ವಿ.ಸಿ ಸ್ವಯಂ ಸೇವಕರು, ಹಜ್ಜಾಜಿಗಳು ಭಾಗವಹಿಸಿದ್ದರು. ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಮುಖಂಡರಾದ ಹನೀಫ್ ಸಖಾಫೀ ಬೋಳ್ಮಾರ್ ಸ್ವಾಗತಿಸಿದರು. ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ನ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫೀ ಅಸೈಗೋಳಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.