UN NETWORKS
ಮಡ್ಯಾರ್ : ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ 71 ನೇ ಸ್ವಾತಂತ್ರೊತ್ಸವ ಮಡ್ಯಾರ್ ಮೈದಾನದಲ್ಲಿ ನಡೆಯಿತು.
ಧ್ವಜಾರೋಹಣವನ್ನು ಸುರೇಶ್ ಗುರೂಜಿಯವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹರೀಶ್ ಮಡ್ಯಾರ್,ದೀರಜ್ ಕೊಂಡಾಣ,ಪ್ರವೀಣ್ ಶೆಟ್ಟಿ ನಡಾರ್,ತಾರನಾಥ ಶೆಟ್ಟಿ ಮಡ್ಯಾರ್,ದಿವ್ಯ ಶೆಟ್ಟಿ,ಸಂತೋಷ್ ಶೆಟ್ಟಿ ಬಾಗವಹಿಸಿದ್ದರು.ಚಂದ್ರಹಾಸ ರೈ ಪಿಲಾರ್ ಸ್ವಾಗತಿಸಿದರು.ಸಂಪತ್ ಮಡ್ಯಾರ್ ದನ್ಯವಾದಗೈದರು.
ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ ನಡೆದ ಸ್ವಾತಂತ್ರೊತ್ಸವ
…………………………………………………………………………………………….
ಅಂಬಿಕಾರೋಡ್: ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ವತಿಯಿಂದ ಅಂಬಿಕಾರೋಡಿನಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.ಸಮಾಜದ ಅಧ್ಯಕ್ಷ ಪವಿತ್ರ ಕುತ್ತಾರ್ ಗಟ್ಟಿ ಧ್ವಜಾರೋಹಣ ನೆರವೇರಿಸಿದರು.
……………………………….
ಉಳ್ಳಾಲ: ಅನುದಾನಿತ ಮೊಗವೀರ ಹಿ.ಪ್ರಾ.ಶಾಲೆಯಲ್ಲಿ 71 ನೇ ಸ್ವಾತಂತ್ರ್ಯ ವರ್ಷದ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಸಂಚಾಲಕ ಸತೀಶ್ ಪುತ್ರನ್ ಧ್ವಜಾರೋಹಣವನ್ನು ನೆರವೇರಿಸಿದರು. ವ್ಯಾಘ್ರ ಚಾಮುಂಡೇಶ್ವರಿ ಟ್ರಸ್ಟ್‍ನ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲಾ ಸಮಿತಿ ಸದಸ್ಯ ರೋಹಿದಾಸ್ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
………………………………….
ತಲಪಾಡಿ: ಫ್ರೆಂಡ್ಸ್ ಪಿಲಿಕೂರು ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಟಿ.ಎಂ ಇಬ್ರಾಹಿಂ ಧ್ವಜಾರೋಹಣವನ್ನು ನೆರವೇರಿಸಿದರು.
ಯಾಕೂಬ್ ಪಿಲಿಕೂರು,ಪಂಚಾಯತ್ ಸದಸ್ಯರಾದ ಫಯಾಝ್ ಪಿಲಿಕೂರು,ಅಕ್ಷತ ಪಿಲಿಕೂರು, ಸ್ಥಳೀಯ ಬಿಜೆಪಿ ಯುವಮೋರ್ಚ ಅಧ್ಯಕ್ಷ ನವೀನ್ ಆಳ್ವ ಪಿಲಿಕೂರು,ಫ್ರೆಂಡ್ಸ್ ಪಿಲಿಕೂರು ಅಧ್ಯಕ್ಷ ನಜೀರ್ ಪಿಲಿಕೂರು,ಕಾರ್ಯಕರ್ತರಾದ ಜಾಫರ್ ಪಿಲಿಕೂರು,ನವಾಝ್ ಪಿಲಿಕೂರು.ಎನ್.ಐ ಇಬ್ರಾಹಿಂ ಅಮೀರ್ ಪಿಲಿಕೂರು,ಪಿ.ಎಚ್ ಅಶ್ರಫ್,ಜಬೀರ್,ಆರೀಫ್,ಸಿರಾಜ್,ನೌಫಲ್,ಫವಾಝ್,ಅಬೂಬಕ್ಕರ್,ಶಪೀಕ್,ರಬೂಬ್,ಶರೀಫ್ ಸೊಂದೇಲು,ಕಾರ್ಯದರ್ಶಿ ನಿಸಾರ್ ಅಹಮ್ಮದ್ ಉಪಸ್ಥಿತರಿದ್ದರು.
………………………………………….
ಉಳ್ಳಾಲ: ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್ ಮೆಂಟ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
……………………………………………………………………….
ಕಣಚೂರು : ಕಣಚೂರು ಸಮೂಹ ಸಂಸ್ಥೆಯಲ್ಲಿ 71ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಕಣಚೂರು ಸಂಸ್ಥೆಯ ಮುಖ್ಯಸ್ಥ ಯು.ಎ. ಮೋನು ದ್ವಜಾರೋಹಣಗೈದರು.
ಕಣಚೂರು ನಿರ್ವಹಣೆ ಮತ್ತು ವಿಜ್ಞಾನ ವಿಭಾಗದ ಪ್ರಾಂಶುಪಾಲ ಇಕ್ಬಾಲ್ ಅಮೀದ್, ಕಣಚೂರು ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಾಥಿಸ್, ಕಣಚೂರು ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಸೈನ್‍ಲ್ಸಹಾಯಕ್ ಡೀನ್ ಡಾ. ಶ್ರೀಶಾ, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ಕಾಲೇಜಿನ ಫಿಸಿಯೋಥೇರಪಿ ವಿಭಾಗದ ಪ್ರಾಂಶುಪಾಲ ಸುಹಾಲಿ ಖಾನ್ ಈ ಸಂದರ್ಭ ಉಪಸ್ಥಿತರಿದ್ದರು.
……………………………………………..
ಅಂಬ್ಲಮೊಗರು: ಜನಸೇವಾ ಯುವಕ ಮಂಡಲ (ರಿ) ಅಂಬ್ಲಮೊಗರು ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವಕ ಮಂಡಲದ ಕಛೇರಿ ಎದುರು ದ್ವಜಾರೊಹಣವನ್ನು ದ.ಕ ಜಿಲ್ಲಾ ಪಂಚಾಯತ್ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಗದೀಶ್ ಶೆಟ್ಟಿಯವರು ನೆರವೇರಿಸಿ ಶುಭ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಸಂಜೀವ ಶೆಟ್ಟಿ, ಸಲಹೆಗಾರರಾದ ಸುರೇಶ್ ಶೆಟ್ಟಿ, ಸ್ಟೀವನ್ ಕ್ರೂಜ್, ಶಿವರಾಮ ಶೆಟ್ಟಿ,ಜಯಶೀಲ ಶೆಟ್ಟಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಪ್ರ.ಕಾರ್ಯದರ್ಶಿ ಆನಿಲ್ ಶೆಟ್ಟಿ , ಸದಸ್ಯರಾದ ಸಂತೋಷ್ ಸುವರ್ಣ, ಗಣೇಶ್ ಪೂಜಾರಿ, ರಂಜೀತ್, ನವೀನ್, ಪ್ರಮೋದ್, ಅಶೋಕ್ ಶೆಟ್ಟಿ, ಉಪಸ್ಥಿತರಿದ್ದರು.
…………………………………………..
ತೊಕ್ಕೊಟ್ಟು: ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರ ತೊಕ್ಕೊಟ್ಟು ಕಚೇರಿಯಲ್ಲಿ 71 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಹಿರಿಯ ಬಿ.ಜೆ.ಪಿ ಮುಖಂಡ ಸೀತಾರಾಮ್ ಬಂಗೇರ ನೆರವೇರಿಸಿದರು. ಈ ಸಂಧರ್ಭದಲ್ಲಿ ಕ್ಷೇತ್ರಾಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಮನೋಜ್ ಆಚಾರ್ಯ, ಡಾ. ಮುನೀರ್ ಬಾವ, ಮೋಹನ್ ದಾಸ್ ಕಿನ್ಯ, ಸುಜಿತ್ ಮಾಡೂರು, ಅಸ್ಗರ್ ಮುಡಿಪು, ಅಶ್ರಫ್ ಹರೇಕಳ, ಸಚಿನ್ ಶೆಟ್ಟಿ, ನವೀನ್ ಶೆಟ್ಟಿ ಕೊಡಕ್ಕಲ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ನಡೆದ ಸ್ವಾತಂತ್ರೋತ್ಸವ
ಮುಡಿಪು : ಮುಡಿಪು ಝೆನಿತ್ ಶಾಲೆಯಲ್ಲಿ 71 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ನಿವೃತ್ತಿ ಆರೋಗ್ಯ ಅಧಿಕಾರಿ ಹಾಜಿ ಹುಸೈನ್ ಅಹಮದ್ ಅವರು ಧ್ವಜಾರೋಹಣ ನೆರವೇರೀಸಿದರು. ವಿಧ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮಗಳು ನಡೆದವು ಹಾಗೂ ಮಕ್ಕಳ ಮನಶಾಸ್ತ್ರಙ್ಞ ರೇಶ್ಮ ಇಬ್ರಾಹೀಂ ಅವರು ಪಾಲ್ಗೋಂಡಿದ್ದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಶಾಲಾ ಅದ್ಯಕ್ಷರಾದ ಮಜೀದ್ ಎಂ.ಎ ಶಾಲಾ ಹಾಗೂ ಶಾಲಾ ಸಂಚಾಲಕರಾದ ನಹಾದ ಮಜೀದ್ ಶಾಲಾ ಮುಖ್ಯೋಧ್ಯಾಯರಾದ ಶ್ರೀಮತಿ ಕ್ಯಾಥರೀನ್ ಡಿಸೋಜ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ರಕ್ಷಕ ಸಂಘದ ಸದಸ್ಯರು ಶಿಕ್ಷಕ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಮುಡಿಪು ಝೆನಿತ್ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ
……………………………………………………………………………
ಮಂಗಳೂರು: 71ನೇ ಸ್ವಾತಂತ್ರೋತ್ಸವನ್ನು ಟೀಮ್ ಮಂಗಳೂರು ಪಿಲಿ ಪ್ರಥಮವಾಗಿ ಆಚರಿಸಿತು. ಅತಿಥಿಗಳಾಗಿ ಹರ್ಷವರ್ಧನ್ ಧ್ವಜಾರೋಹಣ ನಡೆಸಿದರು ಮತ್ತು ಚಂದ್ರಹಾಸ ಪಿಲಾರು ಹಾಗೂ ಜನಾರ್ಧನ ಕುತ್ತಾರ್ ವಾಲ್ಟರ್ ಡಿ’ಸೋಜ ಮತ್ತು ಟೀಮ್ ಮಂಗಳೂರು ಪಿಲಿ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
………………………………………….
ಮೊಂಟೆಪದವು: ಸರಕಾರಿ ಫ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮೊಂಟೆಪದವು ನಲ್ಲಿ ಸ್ವಾತಂತ್ರ್ಯ ಕಾರ್ಯಕ್ರಮ ನಡೆಯಿತು ಶಾಲಾ S D M C ಅಧ್ಯಕ್ಷರಾದ ಮುರುಳಿಧರ್ ಶೆಟ್ಟಿ ಮೂರ್ಲ ಧ್ವಜಹೋರಣ ವನ್ನು ನೆರವೇರಿಸಿದರು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ. ಪದವಿ ಪೂರ್ವ ಕಾಲೇಜು ಮೊಂಟೆಪದವು ಅಧ್ಯಕ್ಷರಾದ ಜಲೀಲ್ ಮೋಟುಗೋಳಿ .ಪದ್ಮನಾಭ ನರಿಂಗಾನ .ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ C H ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು .ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಪಯಾಝ್ ಮೊಂಟೆಪದವು. S D M C ಸದಸ್ಯರಾದ ಗೋಪಾಲ್ ಬಟ್. ಹನೀಫ್ ಶೈನ್ ಚಂದಹಿತ್ತುಲು .ಅಬ್ದುಲ್ ಖಾದರ್ ಕಟ್ಟಪುಣೆ .ಹಾಗೂ ಇಸ್ಮಾಯಿಲ್ ಮೂರ್ಲ. ಶಾಲಾ ಮುಖ್ಯ ಶಿಕ್ಷಕರಾದ ಸಂತೋಷ್ ಕುಮಾರ್ T N .ಕಾಲೇಜು ಪ್ರಿನ್ಸಿಪಾಲ್ ಮಮತಾ ಮೇಡಂ ರವರು ಮತ್ತು ಶಾಲಾ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನರಿಂಗಾನ: ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಜಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸ್ವತಂತ್ರದಿನಾಚರಣೆ ಕಾರ್ಯ ಕ್ರಮ ನಡೆಯಿತು ಊರಿನ ಹಿರಿಯರಾದ ಮೋಹಿದ್ದಿನ್ ಹಾಜಿ ಸುಟ್ಟ ರವರು ಧ್ವಜಹೋರಣ ವನ್ನು ನೆರೆವೇರಿಸಿದರು ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಸದಸ್ಯರಾದ C H ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು ಈ ಕಾರ್ಯಕ್ರಮ ದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಸದಸ್ಯರಾದ ಸುಮುನ ಜಲ್ಲಿ ರವರು ಮತ್ತು K G ಗಟ್ಟಿ ಪ್ರಕಾಶ್ ಶೆಟ್ಟಿ ಮರಿಕ್ಕಳ ಇಂದ್ದಿನ್ ಕುಂಞ ಜಲ್ಲಿ ರಹ್ಮಾನ್ ಮನ್ಸೂರ್ ಜಲ್ಲಿ ಅಂಗನವಾಡಿ ಶಿಕ್ಷಕಿ ಚಂದ್ರ ವತಿ ಮತ್ತು ಊರಿನ ನಾಗರಿಕರು ಭಾಗವಹಿಸಿದ್ದರು.
ನರಿಂಗಾನ: ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಚನ್ನಕಟ್ಟೆ ಅಂಗನವಾಡಿ ಕೇಂದ್ರ ದಲ್ಲಿ ಸ್ವಾತಂತ್ರ್ಯ ಕಾರ್ಯ ಕ್ರಮ ನಡೆಯಿತು ಬಾಲ ವಿಕಾಸ ಸಮಿತಿ ಅಧ್ಯಕ್ಷರು ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ C H ರಹ್ಮಾನ್ ಚಂದಹಿತ್ತುಲು ರವರು ಧ್ವಜಹೋರಣವನ್ನು ನೆರವೇರಿಸಿದರು ಊರಿನ ಹಿರಿಯರಾದ ರಮಣ್ಣ ಶೆಟ್ಟಿ ಮತ್ತ ಅಬ್ದುಲ್ ಖಾದರ್ ಕಟ್ಟಪುಣೆ ಅಬೂಬಕ್ಕರ್ ಆಳ್ವರಬೇಟ್ಟು ಸಂದೇಶ ಭಾಷಣವನ್ನು ಮಾಡಿದರು ಊರಿನ ನಾಗರಿಕರಾದ ಅಬ್ದುಲ್ ರಹ್ಮಾನ್ ಚಂದ್ರ ಕಟ್ಟತ್ತಡಿ ಅಬ್ಬಾಸ್ ಹಾಗೂ ಊರಿನ ನಾಗರಿಕರು ಅಂಗನವಾಡಿ ಶಿಕ್ಷಕಿ ಅಶ್ವಿನಿ ರೈ ಭಾಗವಹಿಸಿದ್ದರು.
ನರಿಂಗಾನ: ಹಿರಿಯ ಪ್ರಾಥಮಿಕ ಶಾಲೆ ನರಿಂಗಾನ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ನಡೆಯಿತು ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ ರವರು ಧ್ವಜಹೋರಣ ನೆರೆವೇರಿಸಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಅ ಊ ರಹ್ಮಾನ್ ಚಂದಹಿತ್ತುಲು ರವರು ಸಂದೇಶ ಭಾಷಣವನ್ನು ಮಾಡಿದರು ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಪಯಾಝ್ ಮೊಂಟೆಪದವು ಬ್ರೆಡ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಲೀಲ್ ಮೋಟುಗೋಳಿ ಪದ್ಮನಾಭ ನರಿಂಗಾನ S D M C ಅಧ್ಯಕ್ಷರಾದ ಅಬೂಬಕ್ಕರ ಚಂದ ಹನೀಫ್ ಶೈನ್ ಚಂದಹಿತ್ತುಲು S D M C ಸದಸ್ಯರಾದ ಹಮೀದ್ ಹಾಜಿ ಚಂದಹಿತ್ತುಲು ಬಶೀರ್ ಮಜಲು ಮತ್ತು ಊರಿನ ನಾಗರಿಕರು ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿ ಗಳು ಭಾಗವಹಿಸಿದ್ದರು.
………………………………………………………………..
ಬಬ್ಬುಕಟ್ಟೆ : ಹಿರಾಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಬ್ಬುಕಟ್ಟೆ ಪೆರ್ಮನ್ನೂರುನಲ್ಲಿ 71ನೇ ಸ್ವಾತಂತ್ರ್ಯದಿನಾಚರಣೆಯನ್ನುಆಚರಿಸಲಾಯಿತು .
ಸುಹಾಸಿನಿ(ಸಮಾಜ ಸೇವಕರು) ಧ್ವಜಾರೋಹಣ ಮಾಡಿದರು.ಶಾಂತಿಎಜ್ಯುಕೇಶನಲ್‍ಟ್ರಸ್ಟಿನ ಅಧ್ಯಕ್ಶರಾದ ಅಬ್ದುಲ್‍ರಹಮಾನ್ ಮತ್ತು ಉಪಾದ್ಯಕ್ಷರಾದ ಎ.ಎಚ್. ಮೆಹಮೂದ್ ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು.
ಕೆ.ಎಮ್.ಶರೀಫ್(ಹಿರಿಯರುಶಾಂತಿಎಜ್ಯುಕೇಶನಲ್‍ಟ್ರಸ್ಟ್)ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.ಸುಹಾಸಿನಿ ಮತ್ತು ಸಮಾಜ ಸೇವಕರಾದ ನಜೀರ್ ಉಳ್ಳಾಲ್ ಈ ದಿನದ ಮಹತ್ವವನ್ನು ವಿವರಿಸಿದರು.
ಶಾಂತಿಎಜ್ಯುಕೇಶನಲ್ ಟ್ರಸ್ಟಿನ ಸಂಚಾಲಕರಾದ ರಹಮತುಲ್ಲ,ಕಾರ್ಯದರ್ಶಿ ಅಬ್ದುಲ್‍ಕರೀಂ,ಟ್ರೆಶರರ್, ಅಬ್ದುಲ್‍ಖಾದರ್, ಟ್ರಸ್ಟಿ ಉಮರ್ ಬಾವ ,ಸಮೀರ್ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯಸ್ಥರು, ಶಿಕ್ಷಕರು,ಶಿಕ್ಷಕೇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಫ್ರ ಫಾತಿಮ ಕಾರ್ಯಕ್ರಮ ನಿರ್ವಹಿಸಿದರು, ಸಾನಿಯ ಸ್ವಾಗತಿಸಿ ನಾಫಿಯಾ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮ ಮುಕ್ತಾಯವಾಯಿತು.
……………………………………………………
ತಲಪಾಡಿ:ಮೈ ನವಿರೇಳಿಸುವ ಧ್ವಜಾರೋಹಣ, ಧ್ವಜವಂದನೆ, ದೇಶಭಕ್ತಿಯನ್ನು ಬಿಂಬಿಸುವ ಗೀತೆಗಳು, ನೃತ್ಯ, ನಾಟಕಗಳು ಆಗಸ್ಟ್ ೧೫ ರಂದು ಶಾರದ ವಿದ್ಯಾನಿಕೇತನ, ತಲಪಾಡಿಯಲ್ಲಿ ಅದ್ದೂರಿಯಾಗಿ ನಡೆಯಿತು. ವಸತಿ ಶಾಲೆಯ ಮಕ್ಕಳಿಂದ ಅನೇಕ ಕಾರ್ಯಕ್ರಮಗಳು ನಡೆದವು.
ಮಕ್ಕಳು ಸ್ವಾತಂತ್ರ್ಸೋವದ ಮಹತ್ವವನ್ನು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ರೂವಾರಿಯನ್ನು ಶ್ರೀಮತಿ. ರಶ್ಮಿ ನಿರೂಪಿಸಿದರು. ವಂದನಾರ್ಪಣೆಯನ್ನು ಶ್ರೀಮತಿ. ಅಮಿತಾ ಮಂಡಿಸಿದರು. ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಪ್ರಶಾಂತ್ ಅಂಚನ್ ಮತ್ತು ಸೂರ್ಯಪ್ರಕಾಶ್ ಪಕ್ಕಳ ಉಪಸ್ಥಿತರಿದ್ದರು.
ಅಧ್ಯಕ್ಷತೆಯ ಸ್ಥಾನವನ್ನು ಸೂರ್ಯಪ್ರಕಾಶ್ ಪಕ್ಕಳ ಅಲಂಕರಿಸಿ, ಮಕ್ಕಳಿಗೆ ಸ್ಫೂರ್ತಿ ತುಂಬುವ ವಿಷಯವನ್ನು ಪ್ರಚುರಪಡಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀಮತಿ. ಲತಾಂಜಲಿ ರೈ, ಅಧ್ಯಾಪಕ ವೃಂದ ಮತ್ತು ಮಕ್ಕಳು ಕಾರ್ಯಕ್ರಮವನ್ನು ಸಂಭ್ರಮದಿಂದ ವೀಕ್ಷಿಸಿದರು. ಶಿಕ್ಷಕೇತರ ಬಂಧುಗಳ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು . ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.
