UN NETWORKS
ಚೆಂಬುಗುಡ್ಡೆ: ಗಿಡನೆಡುವ ಮೂಲಕ ಪರಿಸರ ಒಳಿತಿಗಾಗಿ ನಡೆಯುವ ಕಾರ್ಯಕ್ರಮವನ್ನು ನಗರಸಭೆ ವ್ಯಾಪ್ತಿಯಲ್ಲಿ ಆಯೋಜಿಸಬೇಕೆಂದು ಎಂದು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಅವರು ಸ್ವಾತಂತ್ರೋತ್ಸವದ ಪ್ರಯುಕ್ತ ಉಳ್ಳಾಲ ನಗರಸಭೆಯ 27 ನೇ ವಾರ್ಡಿನಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ.ವಿ.ಆಳ್ವ, ಉಳ್ಳಾಲ ನಗರಸಭೆಯ ಪರಿಸರ ಅಭಿವೃದ್ಧಿ ರಾಯಭಾರಿ ಮಾಧವ ಉಳ್ಳಾಲ್, ಸ್ಥಳೀಯ ಸದಸ್ಯ ಬಾಝಿಲ್ ಡಿಸೋಜ, ದರ್ಗಾ ಉಪಾಧ್ಯಕ್ಷ ಮಹಮ್ಮದ್ ತ್ವಾಹ, ಚೆಂಬುಗುಡ್ಡೆ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ಅಬ್ಬಾಸ್ ಮುಸ್ಲಿಯಾರ್, ನಗರಸಭೆ ಸದಸ್ಯೆ ಭಾರತಿ , ನಾಮನಿರ್ದೇಶಿತ ಸದಸ್ಯರುಗಳಾದ ರವಿ ಕಾಪಿಕಾಡ್, ರಿಚ್ಚಿ ವೇಗಸ್ ಧರ್ಮನಗರ, ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷ ಸೋಮಯ್ಯ, ರಾಜ ಬಮಡಸಾಲೆ, ಜೆನೆಟ್ ಟೈಲರ್, ಮನ್ಸೂರ್ ಮಂಚಿಲ, ಅಶ್ರಫ್ ಪಿಲಾರ್, ಫಾರುಕ್, ಮಹಮ್ಮದ್ ಸಲಾಂ, ಝುಲ್ಫಿಕರ್ ಉಪಸ್ಥಿತರಿದ್ದರು.
