Site icon Ullalavani

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಸಸಿ ವಿತರಣೆ

UN NETWORKS

ತೊಕ್ಕೊಟ್ಟು: ಸಸಿಗಳನ್ನು ನೆಡುವ ಮೂಲಕ ಪರಿಸರ ಪೂರಕ ಕಾರ್ಯಗಳಿಗೆ ಒತ್ತನ್ನು ಕೊಡುವುದರ ಮೂಲಕ, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸೋಮೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಸಮೃದ್ಧಿ ಹೌಸಿಂಗ್ ಸೊಸೈಟಿ ವತಿಯಿಂದ ಸೊಸೈಟಿ ಆವರಣದಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಟಿ.ಸುವರ್ಣ ಮಾತನಾಡಿ ಸ್ವಾತಂತ್ರ್ಯೋತ್ಸವದ ದಿನದಂದು ವಿತರಿಸಲಾದ ಗಿಡಗಳನ್ನು ನೆಡುವುದರ ಜತೆಗೆ ಪೋಷಿಸುವ ಕೆಲಸವನ್ನು ಮಾಡಿದಲ್ಲಿ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದಂತಾಗುವುದು ಎಂದರು.

ಈ ಸಂದರ್ಭ ಭರತ್ ರಂಗೋಲಿ, ದಯಾನಂದ, ರಾಜೇಶ್ ಕೆರೆಬೈಲ್, ಬಾಲಕೃಷ್ಣ, ವನಮಾಲ ಪ್ರಕಾಶ್, ರೇಣುಕೋ ಕೋಟ್ಯಾನ್, ಜನಾರ್ದನ ಆಚಾರ್ಯ, ಪ್ರೇಮನಾಥ್ ಉಳ್ಳಾಲ್, ಭಾಸ್ಕರ್, ಫ್ರಾನ್ಸಿಸ್ ಡಿಸೋಜ ಉಪಸ್ಥಿತರಿದ್ದರು. ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version