UN NETWORKS
ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಹಾಗೂ ಬಿ.ಎಸ್ಸಿ ವಿಭಾಗದ ಪಠ್ಯಪುಸ್ತಕದಲ್ಲಿ ದೇಶ ಕಾಯುವ ಸೈನಿಕರ ಕುರಿತು ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿರುವ ನಡೆಯ ವಿರುದ್ಧ ಮತ್ತು ಪಠ್ಯ ಪುಸ್ತಕವನ್ನು ಆಯ್ಕೆ ಮಾಡಿದ ಸಮಿತಿ ಸದಸ್ಯರಿಗೆ ನೋಟೀಸು ಜಾರಿ ಮಾಡುವಂತೆ ಆಗ್ರಹಿಸಿ ಕರಾವಳಿ ಸಾಂಸ್ಕೃತಿಕ ಪರಿಷತ್ ವತಿಯಿಂದ ಅಪರ ಜಿಲ್ಲಾಧಿಕಾರಿಯವರಿಗೆ ಶುಕ್ರವಾರ ಮನವಿಯನ್ನು ಸಲ್ಲಿಸುವ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಈ ವೇಳೆ ಕರಾವಳಿ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಸತೀಶ್ ಕುಂಪಲ, ಭಗತ್ ಸಿಂಗ್ ಸೇವಾ ಪತಿಷ್ಠಾನದ ಅಧ್ಯಕ್ಷ ಜೀವನ್‍ಕುಮಾರ್ ತೊಕ್ಕೊಟ್ಟು, ಸೈನಿಕರಾದ ವೆಂಕಟೇಶ್ ಕುಂಪಲ, ಸಿದ್ದಾರ್ಥ್, ಕೆ.ಆರ್.ಪೂರ್ಣೆಶ್, ಸುಧಾಕರ್ ಕುಂಪಲ, ದಾಮೋದರ್ ಎಸ್, ನಗರಸಭೆ ಮಾಜಿ ಸದಸ್ಯ ದಯಾನಂದ್ ತೊಕ್ಕೊಟ್ಟು, ಸತೀಶ್ ಕಿನ್ಯಾ, ಸಂಪತ್ ಕುಕ್ಯಾನ್, ಬೃಜೇಶ್ ನಾಯರ್, ಪುರುಷೋತ್ತಮ್ ಶೆಟ್ಟಿ ಪುದು, ಸೂರಜ್ ಕುಂಪಲ, ಹರೀಶ್ ಅಂಬ್ಲಮೊಗರು, ಗಣೇಶ್ ಕಾಪಿಕಾಡ್, ದೀಕ್ಷಿತ್ ಉಪಸ್ಥಿತರಿದ್ದರು.