Site icon Ullalavani

ಹನೀಫ್ ನಿಝಾಮಿ ಹೇಳಿಕೆ ಖಂಡನೀಯ:ಅಸೈ ನಾಗರೀಕರು

UN NETWORKS

ಉಳ್ಳಾಲ: ಬೋಳಿಯಾರು ಬಿಜೆಪಿ ಸಭೆಯಲ್ಲಿ ಹನೀಫ್ ನಿಝಾಮಿಯವರು ಮಂಜನಾಡಿ ಗ್ರಾ.ಪಂ ಅಧ್ಯಕ್ಷರನ್ನು ಹೀನಾಯವಾಗಿ ನಿಂದಿಸಿರುವುದು ಖಂಡನೀಯ, ವಾರ್ಡಿಗೆ ಬಿಜೆಪಿಯವರು ಕೇವಲ 30,000 ರೂ. ನೀರು ನೀಡಿದ್ದರೆ, ಸಚಿವರು ಕೋಟ್ಯಂತರ ಅನುದಾನವನ್ನು ಒದಗಿಸಿದ್ದಾರೆ ಎಂದು ಅಸೈ ಮದಕ ನಿವಾಸಿ ಅಬೂಬಕರ್ ಎಂಬವರು ಹೇಳಿದ್ದಾರೆ.

ಹನೀಫ್ ನಿಝಾಮಿ ನಡೆ ವಿರೋಧಿಸಿ ಅಸೈ ಮದಕ ನಾಗರಿಕರು ಪ್ರತಿಕ್ರಿಯಿಸಿ, ಕಾಂಗ್ರೆಸ್ ನ ಸಚಿವರು ಐದು ವರ್ಷದ ಅವಧಿಯಲ್ಲಿ ಅಸೈಗೋಳಿ 5 ಲಕ್ಷ ರೂ, ಬೊಳ್ಯ ರಸ್ತೆ ರೂ. 5ಲಕ್ಷ, ಬಲ್ಪ ಗೋಳಿ 13 ಲಕ್ಷ ಸೇರಿದಂತೆ ಕೋಟಿಗೂ ಅಧಿಕ ಅನುದಾನ ಒದಗಿಸಿದ್ದು, ವಾರ್ಡು ಅಭಿವೃದ್ಧಿಯಲ್ಲಿ ಮುಂದಿದೆ. ಆದರೆ ಅಸೈ ಮದಕ ವಾರ್ಡಿನ ಸದಸ್ಯ ಮಹಮ್ಮದ್ ಅಸೈ ಅವರನ್ನು ನಿಂದಿಸಿ, ಕುಡಿಯುವ ನೀರು ಮತ್ತು ಬೀದಿ ದೀಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಿಝಾಮಿ ನಡೆ ಸರಿಯಲ್ಲ. ಅಧಿಕಾರಿಗಳು ಮತ್ತು ನಿಝಾಮಿ ವಾರ್ಡಿಗೆ ಬಂದು ದಾರಿದೀಪಗಳ, ಕುಡಿಯುವ ನೀರಿನ ಯೋಜನೆಗಳನ್ನು ಪರಿಶೀಲಿಸಿ ಮತ್ತೆ ಮಾತನಾಡಲಿ ಎಂದು ಆಗ್ರಹಿಸಿರುವ ಅವರು ವೈಯಕ್ತಿಕ ಹಿತಾಸಕ್ತಿಗಾಗಿ ಕೇವಲ 30,000 ರೂ. ವನ್ನು ನೀಡಿದ ಬಿಜೆಪಿಯನ್ನು ಹೊಗಳಿ , ವಾರ್ಡಿಗೆ ಕೋಟ್ಯಂತರ ಹಣ ನೀಡಿದ ಸಚಿವರನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಮೊಯ್ದಿನ್ ಕುಂಞ ಸಿ.ಕೆ.ಎಂ, ಅಶ್ರಫ್ ಬೆಂಗಳೂರು, ಸಲೀಂ , ಎ.ಪಿ.ನವಾಝ್ ಮೊದಲಾದವರು ಇದ್ದರು.

Exit mobile version