Site icon Ullalavani

ದೇರಳಕಟ್ಟೆ : ರಸ್ತೆಬದಿಯಲ್ಲಿದ್ದ ಗೂಡಂಗಡಿಗಳ ತೆರವು

UN NETWORKS

ದೇರಳಕಟ್ಟೆ : ದೇರಳಕಟ್ಟೆ ಜಂಕ್ಷನ್ನಿನ ರಸ್ತೆಬದಿಯಲ್ಲಿದ್ದ ಬೀದಿ ಬದಿ ವ್ಯಾಪಾರಸ್ಥರ ಮತ್ತು ಗೂಡಂಗಡಿಗಳ ತೆರವು ಕಾರ್ಯಾಚರಣೆ ಬೆಳ್ಮ ಗ್ರಾಮ ಪಂಚಾಯತ್ ವತಿಯಿಂದ ಶುಕ್ರವಾರ ನಡೆಯಿತು.

ಬೆಳ್ಮ ಪಂಚಾಯತ್ ಗೆ ಒಳಪಡುವ ದೇರಳಕಟ್ಟೆ ಜಂಕ್ಷನ್ನಿನ ರಸ್ತೆ ಬದಿಗಳಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳ ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಪಂಚಾಯತ್ ಆಡಳಿತ ಮುನ್ಸೂಚನೆ ನೀಡಿ ತೆರವುಗೊಳಿಸಿದೆ. ಅಂಗಡಿಗಳ ಕಾರ್ಯಾಚರಣೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತಿತ್ತು. ಇದರಿಂದ ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಪರಿಸರವನ್ನು ಸ್ವಚ್ಛ, ಸುಂದರವಾಗಿ ಮಾಡಬೇಕು ಅನ್ನುವ ಉದ್ದೇಶದಿಂದ 15 ಬೀದಿ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ವಾಹನಗಳು ನಿಲ್ಲಲ್ಲು ಅಸಾಧ್ಯವಾಗುತಿತ್ತು. ಅದರಂತೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರಾಗಿಯೇ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಯಶಸ್ವಿ ಕಾರ್ಯಾಚರಣೆ ನಡೆದಿದೆ ಎಂದು ಬೆಳ್ಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ತಿಳಿಸಿದರು.

ಗ್ರಾ.ಪಂ ಸದಸ್ಯೆ ಕಬೀರ್. ಡಿ, ಯೂಸುಫ್ ಬಾವ, ಅಕ್ಸಾ ಉಸ್ಮಾನ್, ಸಿಬ್ಬಂದಿ ಬಾಲಕೃಷ್ಣ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Exit mobile version