UN NETWORKS
ಮಂಜೇಶ್ವರ: ಎಸ್ಸೆಸ್ಸೆಫ್ ಮಂಜೇಶ್ವರ ಡಿವಿಷನ್ ಸಾಹಿತ್ಯೊತ್ಸವ್ ಆ.12,13 ಶನಿ ಮತ್ತು ಆದಿತ್ಯವಾರಗಳಲ್ಲಿ ಮೀಯ್ಯಪ್ಪದವು ಶಾಲಾ ವಠಾರದಲ್ಲಿ ನಡೆಯಲಿದೆ. ಶನಿವಾರ ಸಂಜೆ 3 ಗಂಟೆಗೆ ಸ್ವಾಗತ ಕಮಿಟಿ ಚೆಯರ್‍ಮಾನ್ ಹಾರಿಸ್ ಹನೀಫಿ ಯವರ ನೇತ್ರತ್ವದಲ್ಲಿ ದ್ವಜಾರೋಹಣ ನಡೆಯಲಿದೆ.
ಬಳಿಕ ಹತ್ತು ಸೆಕ್ಟರ್ ಗಳಿಂದ ಆಗಮಿಸಿದ ಸುಮಾರು 600 ರಷ್ಟು ವಿದ್ಯಾರ್ಥಿಗಳು 100ರಷ್ಟು ವಿಭಾಗಗಳಲ್ಲಾಗಿ ಮನೋಹರವಾದ ಕಲಾ ಸಾಹಿತ್ಯ ಸ್ಪರ್ದೆಗಳು ನಡೆಯಲಿದೆ. ಆ .13 ರವಿವಾರ ಸಂಜೆ 3 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಡಿವಿಷನ್ ಅಧ್ಯಕ್ಷ ಯಹ್ಕೂಬ್ ನಹೀಮಿ ಅಲ್ ಅಫ್ಳಲಿ ಗುಡ್ಡಗೇರಿ ಅಧ್ಯಕ್ಷತೆಯಲ್ಲಿ ಡಿವಿಷನ್ ಉಪಾಧ್ಯಕ್ಷ ಸಯ್ಯಿದ್ ಉಬೈದುಲ್ಲಾ ಯಾಸೀನ್ ತಂಙಳ್ ಪ್ರಾರ್ಥನೆ ನಡೆಸುವರು. ಎಸ್ ವೈ ಎಸ್ ಜಿಲ್ಲಾ ಉಪಾದ್ಯಕ್ಷ ಸಯ್ಯಿದ್ ಜಲಾಲುದ್ದೀನ್ ಸಹದಿ ಅಲ್ ಬುಖಾರಿ ಉಧ್ಘಾಟಿಸುವರು.
ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಆವಳ, ಜಿಲ್ಲಾ ಕಾರ್ಯದರ್ಶಿ ಕೆ ಎಂ ಅಬ್ದುರ್ರಹ್ಮಾನ್ ಕಳತ್ತೂರ್ ಅನುಮೋಧನಾ ಭಾಷಣ ಮಾಡುವರು. ಕೇರಳ ಮುಸ್ಲಿಂ ಜಮಾಅತ್ ಮಂಜೇಶ್ವರ ಝೋನ್ ಅಧ್ಯಕ್ಷ ಮೂಸಲ್ ಮದನಿ ತಲಕ್ಕಿ, ಮೀಂಜ ಪಂಚಾಯತ್ ಸದಸ್ಯರಾದ ವಹೀದ್ ಕೆ, ಚಂದ್ರಶೇಖರ್ ಕೆ, ಕಿರ್ಷ್ಣ ಕೆ, ಎಸ್ ವಿ ವಿ ಎಚ್ ಎಸ್ ಮ್ಯಾನೇಜರ್ ಡಾ: ಜಯಪ್ರಕಾಶ ನರಾಯಣ ತೊಟ್ಟತ್ತೋಡಿ, ಎಸ್ ವಿ ವಿ ಎಯುಪಿ ಶಾಲಾ ಮ್ಯಾನೇಜರ್ ಆರ್ ಎಂ ಶ್ರೀದರ ರಾವ್ ಸಮ್ಮಾನ ವಿತರಣೆ ನಡೆಸುವರು. ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಮಚ್ಚಂಪಾಡಿ, ಸ್ವದಖ ಹಿಮಮಿ ಪಾಪಿಲ, ಮುಹಮ್ಮದ್ ಸಖಾಫಿ ಸೋಂಕಾಲ್, ಫಾರೂಖ್ ಚಿನ್ನಮೊಗರು, ಝಖರಿಯ್ಯ ಬೊಳ್ಮಾರ್ ಮುಂತಾದವರು ವೇದಿಕೆಯಲ್ಲಿರುವರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ನಂಷಾದ್ ಬೇಕೂರ್ ಸ್ವಾಗತಿಸಿ ಸ್ವಾಗತ ಸಂಘ ಕನ್ವೀನರ್ ಅಬ್ಬಾಸ್ ಕುಳಬೈಲ್ ವಂದಿಸುವರು.