UN Networks
ಉಳ್ಳಾಲ: ಅಣ್ಣ-ತಂಗಿ ಸಂಭದದ ಪಾವಿತ್ರತೆಯನ್ನು ತಿಳಿಸುವ ಭಾಂದವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ತೊಕ್ಕೊಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆಯಿತು.
ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ ರಕ್ಷೆಯನ್ನು ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿದ ಯು.ಟಿ.ಖಾದರ್ ಅಣ್ಣ-ತಂಗಿ ಸಂಭದದ ಪಾವಿತ್ರತೆಯನ್ನು ಸಾರುವ ರಕ್ಷಾಬಂಧನ ಹಬ್ಬಕ್ಕೆ ವಿಶೇಷ ಮಹತ್ವಿದೆ,ಭಾರತೀಯರು ಜಾತಿ-ಮತ ಬೇದವಿಲ್ಲದೆ ನಾವೆಲ್ಲರೂ ಒಂದೇ ಎಂದು ಒಗ್ಗೂಡಿದಾಗ ಮಾತ್ರ ದೇಶೋದ್ಧಾರವಾಗಲು ಸಾದ್ಯ ಎಂದರು.
ತೊಕ್ಕೊಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿಶ್ವೇಶ್ವರಿ,ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ನಗರಸಭಾ ಸದಸ್ಯ ಬಾಝಿಲ್ ಡಿಸೋಜ, ಸುಕುಮಾರ್,ರಝಿಯಾ ಇಬ್ರಾಹಿಂ,ಮುಸ್ತಫ ಅಬ್ದುಲ್ಲ, ನಗರಸಭಾ ನಾಮ ನಿರ್ದೇಶಕ ಸದಸ್ಯರಾದ ರವಿ ಭಟ್ನಗರ,ಕಿಶೋರ್,ರಿಚರ್ಡ್,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ,ಸೋಮೇಶ್ವರ ಪಂಚಾಯತ್ ಸದಸ್ಯ ದೀಪಕ್ ಪಿಲಾರ್,ಮೂಡ ಸದಸ್ಯ ಮುರಳಿ ಸಾಲಿಯಾನ್ ಉಪಸ್ಥಿತರಿದ್ದರು.